ಮುಂಬೈ :ದಿನಾಂಕ 7, ಫೆಬ್ರವರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸಿದೆ. 1999ರ ಈ ದಿನ ಅರುಣ್ ಜೇಟ್ಲಿ(ಅಂದು ಫಿರೋಜ್ ಷಾ ಕೋಟ್ಲಾ)ಮೈದಾನದಲ್ಲಿ ಕನ್ನಿಡಿಗ ಅನಿಲ್ ಕುಂಬ್ಳೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.
2 ಟೆಸ್ಟ್ಗಳ ಸರಣಿಗೆ ಭಾರತ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಮೊದಲ ಚೆನ್ನೈನಲ್ಲಿ ನಡೆದಿದ್ದ ಪಂದ್ಯವನ್ನು 12 ರನ್ಗಳ ರೋಚಕ ಜಯ ಸಾಧಿಸಿ 1-0ಯಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿದ್ದರು.
ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ ಬ್ಯಾಟಿಂಗ್ಗೆ ಇಳಿದ ಪಾಕ್ ಭಾರತ ನೀಡಿದ್ದ 420 ರನ್ಗಳ ಗುರಿ ಬೆನ್ನತ್ತಿತ್ತು. ಶಾಹಿದ್ ಅಫ್ರಿದಿ(41) ಮತ್ತು ಸೈಯದ್ ಅನ್ವರ್(69) ಮೊದಲ ವಿಕೆಟ್ಗೆ 101 ರನ್ಗಳ ಜೊತೆಯಾಟವಾಡಿದ್ದರು. ಕುಂಬ್ಳೆ ಬೌಲಿಂಗ್ಗೆ ಇಳಿಯುವುದಕ್ಕೂ ಮೊದಲು ಪಾಕ್ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು.
25ನೇ ಓವರ್ನಲ್ಲಿ ದಾಳಿಗೆ ಇಳಿದ ಅನಿಲ್ ಕುಂಬ್ಳೆ, ಆಫ್ರಿದಿಯನ್ನ ಔಟ್ ಮಾಡಿದ್ರು. ಅಲ್ಲಿಂದ ಪಾಕ್ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಯ್ತು. 101/0 ಇದ್ದ ಪಾಕಿಸ್ತಾನ 128 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ಗಳನ್ನ ಕಳೆದುಕೊಂಡಿತು.