ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಮೊದಲ ಟಿ-20 ಹಾಗೂ ಐಪಿಎಲ್ನ ಏಕೈಕ ಶತಕ ಸಿಡಿಸಿ ಇಂದಿಗೆ 9 ವರ್ಷ ಕಳೆದಿದೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ನಾಯಕನಾಗಿರುವ ರೋಹಿತ್ ಶರ್ಮಾ 2012, ಮೇ 12ರಂದು ತಮ್ಮ ಮೊದಲ ಟಿ-20 ಮತ್ತು ಐಪಿಎಲ್ನ ಏಕೈಕ ಶತಕ ಸಿಡಿಸಿದ್ದರು. ಅವರು 5ನೇ ಆವೃತ್ತಿಯ 58ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶತಕ ಸಿಡಿಸಿದ್ದರು.
ಅಂದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು ಹರ್ಶಲ್ ಗಿಬ್ಸ್ ಅಜೇಯ 66 ರನ್ ಗಳಿಸಿದರೆ, ರೋಹಿತ್ ಅಜೇಯ ಶತಕ ಸಿಡಿಸಿದ್ದರು. ಅವರು ಒಟ್ಟಾರೆ 60 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ 109 ರನ್ ಗಳಿಸಿದ್ದರು. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ 27 ರನ್ಗಳಿಂದ ಗೆಲುವು ಸಾಧಿಸಿತ್ತು.