ಶಾರ್ಜಾ :ದಕ್ಷಿಣ ಆ್ರಫ್ರಿಕಾದ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಂಡಿಯೂರುವ ಮೂಲಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಗೆ ಬೆಂಬಲಿಸಿದ್ದಾರೆ. ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಮಂಡಿಯೂರಲು ನಿರಾಕರಿಸಿ ಪಂದ್ಯದಿಂದ ಹೊರಗುಳಿದಿದ್ದರು. ಇದು ಕ್ರಿಕೆಟ್ ಲೋಕದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ವರ್ಣಬೇಧ ನೀತಿಯನ್ನು ಕಂಡಿಸಿ ವಿಶ್ವದಾದ್ಯಂತ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನ ನಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಕ್ರೀಡಾ ಜಗತ್ತು ಕೂಡ ಪಂದ್ಯಾರಂಭಕ್ಕೂ ಮುನ್ನ ಮಂಡಿಯೂರಿ ಕುಳಿತುಕೊಳ್ಳುವ ಮೂಲಕ ಬಿಎಲ್ಎಸ್ ಆಂದೋಲನಕ್ಕೆ ಬೆಂಬಲ ಸೂಚಿಸುತ್ತಿವೆ.
ಇದೀಗ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲೂ ಹಲವು ತಂಡಗಳು ಈ ಚಳವಳಿಗೆ ಬೆಂಬಲ ನೀಡಿದ್ದವು. ಆದರೆ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಎಲ್ಲಾ ಆಟಗಾರರಿಗೂ ಮಂಡಿಯೂರಲು ನೀಡಿದ್ದ ಆದೇಶವನ್ನು ಡಿಕಾಕ್ ಖಂಡಿಸಿದ್ದರು. ಇವರ ನಿರ್ಧಾರ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು.