ದುಬೈ: ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಮಂಗಳವಾರ ಬಿಡುಗಡೆ ಯಾಗಿರುವ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ 2 ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಬಡ್ತಿಪಡೆದಿದ್ದರೆ, ನಾಯಕಿ ಮಿಥಾಲಿ ರಾಜ್ 2ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.
710 ಅಂಕಗಳನ್ನು ಹೊಂದಿರುವ ಸ್ಮೃತಿ ದಕ್ಷಿಣ ಆಫ್ರಿಕಾದ ಲೆಜಿಲ್ ಲೀ(701) ಮತ್ತು ಇಂಗ್ಲೆಂಡ್ನ ಟಮ್ಮಿ ಬ್ಯೂಮಾಂಟ್(696) ರನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಅಲಿಸ್ ಹೀಲಿ ಅಗ್ರಸ್ಥಾನದಲ್ಲಿರುವ ಪಟ್ಟಿಯಲ್ಲಿ 5ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಮಹಿಳಾ ಆ್ಯಶಸ್ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ ಮಹಿಳೆಯರು ಏಕದಿನ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಬೆತ್ ಮೂನಿ ಬ್ಯಾಟಿಂಗ್ ವಿಭಾಗದಲ್ಲಿ 8 ರಿಂದ 3ಕ್ಕೆ ಬಡ್ತಿ ಪಡೆದರೆ, ಭಾರತದ ಸರಣಿಯ ವೇಳೆ ಆಲ್ರೌಂಡರ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದ ಎಲಿಸ್ ಪೆರ್ರಿ(407) ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ(229) 4ನೇ ಶ್ರೇಯಾಂಕದಲ್ಲಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದಲ್ಲದೆ, ಬೌಲಿಂಗ್ ಶ್ರೇಯಾಂಕದಲ್ಲೂ ಪೆರ್ರಿ ಅಗ್ರ 10ಕ್ಕೆ ಮರಳಿದ್ದಾರೆ. ಅವರು 16ರಿಂದ 9ನೇ ಸ್ಥಾನಕ್ಕೆ ಮರಳಿದ್ದಾರೆ, ಸರಣಿಯಲ್ಲಿ ಸೋಲು ಕಂಡರು ಇಂಗ್ಲೆಂಡ್ನ ಸ್ಪಿನ್ನರ್ ಎಕ್ಲೆಸ್ಟೋನ್ ರಿಂದ 4ರಿಂದ 3ನೇ ಸ್ಥಾನಕ್ಕೆ, ಬ್ರಂಟ್ 7ರಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ ಮತ್ತು ಭಾರತದ ಜೂಲನ್ ಗೋಸ್ವಾಮಿ ಅಗ್ರ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಯ 100 ಟೆಸ್ಟ್ ಬೆಂಗಳೂರಿನ ಬದಲು ಮೊಹಾಲಿಯಲ್ಲಿ ನಡೆಯುವ ಸಾಧ್ಯತೆ?