ಹೈದರಾಬಾದ್: ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಸಪ್ಟೆಂಬರ್ 29 ರಿಂದ ವಿಶ್ವಕಪ್ನ ಅಭ್ಯಾಸ ಪಂದ್ಯಗಳು ಆರಂಭವಾಗಲಿದೆ. ಅಕ್ಟೋಬರ್ 5ಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮುಖಾಮುಖಿಯ ಮೂಲಕ ವಿಶ್ವಕಪ್‌ಗೆ ಅಧಿಕೃತ ಚಾಲನೆ ದೊರೆಯಲಿದೆ. ಮಾರ್ಕ್ಯೂ ಈವೆಂಟ್‌ಗೆ ತಯಾರಿ ನಡೆಸಲು ಭಾರತಕ್ಕೆ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ತಂಡಗಳು ಭಾರತಕ್ಕೆ ಬಂದಿಳಿದಿವೆ.
ಆಸ್ಟ್ರೇಲಿಯಾ ಭಾರತದ ಜೊತೆಗೆ ಏಕದಿನ ಸರಣಿಯನ್ನು ಆಡಿದರೆ, ನೆದರ್ಲ್ಯಾಂಡ್ ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದೆ. ಅಚ್ಚರಿಯ ವಿಷಯ ಎಂದರೆ ಇಲ್ಲಿನ ಸ್ಪಿನ್ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡಲು ಕಲಿಯಲು ಇಲ್ಲಿನ ನೆಟ್ಸ್ ಬೌಲರ್ಗಳನ್ನು ತಂಡದ ಬೌಲಿಂಗ್ಗೆ ಆಯ್ಕೆ ಮಾಡಿಕೊಂಡಿದೆ. ನೆದರ್ಲೆಂಡ್ ಬೆಂಗಳೂರಿನ ಆಲೂರಿನ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ಆದರೆ, ಆಲೂರಿನಲ್ಲಿ ಅಭ್ಯಾಸ ಆರಂಭಿಸಿರುವ ನೆದರ್ಲೆಂಡ್ ತಂಡವು ಫುಡ್ ಡೆಲಿವರಿ ಬಾಯ್ ಒಬ್ಬರನ್ನು ನೆಟ್ ಬೌಲರ್ ಆಗಿ ನೇಮಿಸಿದೆ. ಭಾರತಕ್ಕೆ ತೆರಳುವ ಮುನ್ನ ನೆದರ್ಲ್ಯಾಂಡ್ ನೆಟ್ಸ್ನಲ್ಲಿ ಬೌಲಿಂಗ್ನಲ್ಲಿ ಮಾಡಲು ಉತ್ತಮ ಸ್ಪಿನ್ನರ್ಗಳು ಬೇಕು ಎಂದು ಜಾಹೀರು ಕೊಟ್ಟಿತ್ತು. ಅಲ್ಲದೇ ಭಾರತದ ಬೌಲರ್ಗಳೇ ಆಗಬೇಕು ಎಂದು ಷರತ್ತನ್ನು ವಿಧಿಸಿತ್ತು.
ಈಗ ನೆದರ್ಲೆಂಡ್ ಫುಡ್ ಡೆಲಿವರಿ ಬಾಯ್ ಒಬ್ಬರನ್ನು ನೆಟ್ ಬೌಲಿಂಗ್ಗಾಗಿ ನೇಮಕ ಮಾಡಿಕೊಂಡಿದೆ. ಮುಂಬರುವ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಲು ಡಚ್ ಬ್ಯಾಟರ್‌ಗಳಿಗೆ ಸಹಾಯ ಮಾಡಲು ನೆಟ್ ಬೌಲರ್ ಆಗಿ ಆಯ್ಕೆಯಾದ ಲೋಕೇಶ್ ಅವರ ಜೀವನ 48 ಗಂಟೆಗಳಲ್ಲಿ ತಲೆಕೆಳಗಾಗಿದೆ. ಬಿಸಿಲು ಮಳೆ ಎನ್ನದೇ ಆಹಾರಗಳನ್ನು ಮನೆ ಮನೆ ಕೊಡುತ್ತಿದ್ದ ಹುಡುಗ ಈಗ ಅಂತಾರಾಷ್ಟ್ರೀಯ ತಂಡದ ನೆಟ್ ಬೌಲರ್ ಆಗಿದ್ದಾರೆ.