ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಿದ್ದ ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಇಂಗ್ಲೆಂಡ್ನಲ್ಲಿ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ನೇರವಾಗಿ ಇಂಗ್ಲೆಂಡ್ಗೆ ಮೇ 11 ರಂದು ಪ್ರಯಾಣಿಸಲಿದ್ದಾರೆ.
ಜೂನ್ 18ರಿಂದ 22 ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ನಾಯಕ ಕೇನ್ ವಿಲಿಯಮ್ಸನ್, ಕೈಲ್ ಜೆಮೀಸನ್, ಮಿಚೆಲ್ ಸ್ಯಾಂಟ್ನರ್ ಮತ್ತು ಫಿಸಿಯೋ ಟಾಮಿ ಸಿಮ್ಸೆಕ್ ನವ ದೆಹಲಿಯಲ್ಲಿಯೇ ಮಿನಿ ಬಬಲ್ನಲ್ಲಿದ್ದಾರೆ.
ಇವರೆಲ್ಲರೂ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ನೇರವಾಗಿ ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ನ್ಯೂಜಿಲ್ಯಾಂಡ್ನಿಂದಲೇ ಇಂಗ್ಲೆಂಡ್ಗೆ ಹೋಗಲಿದ್ದಾರೆ.
ಆದರೆ, ವೇಗದ ಬೌಲರ್ ಟ್ರೆಂಟ್ ಬೌಲ್ಟ್ ದೆಹಲಿಯಿಂದ ಚಾರ್ಟರ್ ಫ್ಲೈಟ್ನಲ್ಲಿ ತಮ್ಮ ಕೋಚ್ ಕ್ರಿಸ್ ಡೋನಾಲ್ಡ್ಸನ್ ಅವರೊಡನೆ ತವರಿಗೆ ಹಿಂತಿರುಗಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಕೆಲವು ಸಮಯ ಕಳೆಯಲಿದ್ದಾರೆ. ನಂತರ ಭಾರತದ ವಿರುದ್ಧ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಎನ್ಜಿಸಿ ಖಚಿತಪಡಿಸಿದೆ.
ಇದನ್ನು ಓದಿ: "ಮೊದಲು ಎಲ್ಲರನ್ನೂ ಜೋಪಾನವಾಗಿ ಮನೆಗೆ ಕಳುಹಿಸಿ, ಕೊನೆಯಲ್ಲಿ ನಾನು ಹೋಗ್ತೇನೆ'