ದುಬೈ: ಐಸಿಸಿ ಟಿ-20 ವಿಶ್ವಕಪ್ (ICC T20 World Cup Final) ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕೀವಿಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ. ಆಸ್ಟ್ರೇಲಿಯಾಗೆ ಗೆಲ್ಲಲು 173 ರನ್ಗಳ ಗುರಿ ನೀಡಿದೆ.
ನ್ಯೂಜಿಲ್ಯಾಂಡ್ ಪರ ಓಪನರ್ ಆಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್, ಮಿಚೆಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ಎಡವಿದರು. ಮಿಚಲ್ 11 ರನ್ಗಳಿಸಿದಾಗ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ನ್ಯೂಜಿಲ್ಯಾಂಡ್ ತಂಡದ ಮೊತ್ತ 28 ರನ್ ಆಗಿತ್ತು.
ಮಿಚಲ್ ನಂತರ ಕ್ರೀಸ್ಗಿಳಿದ ನಾಯಕ ವಿಲಿಯಮ್ಸನ್, ಗಪ್ಟಿಲ್ ಜೊತೆ ಸೇರೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 7 ಓವರ್ಗಳಲ್ಲಿ 40 ರನ್ಗಳ ಜೊತೆಯಾಟವಾಡಿತು. ಆದರೆ, ಆ್ಯಂಡ ಜಂಪಾ, ಗಪ್ಟಿಲ್ 28 ರನ್ಗಳಿಸಿದ್ದಾಗ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನ ಬೇರ್ಪಡಿಸಿದರು.