ವೆಲ್ಲಿಂಗ್ಟನ್ (ನ್ಯೂಜಿಲೆಂಡ್):ನ್ಯೂಜಿಲ್ಯಾಂಡ್ ಪ್ರವಾಸ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಸವಕಾಶ ಎಂದು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು. ಶುಕ್ರವಾರ ನಡೆಯಬೇಕಿದ್ದ ಮೊದಲನೆಯ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಯಿತು. ಪಂದ್ಯ ರದ್ದಾದ ಬಗ್ಗೆ ಮಾದ್ಯಮದವರೊಂದಿಗೆ ಮಾತಿಗಿಳಿದ ಅವರು ಭಾರತದ ಭವಿಷ್ಯದ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಭಾರತದ ಯುವ ಆಟಗಾರರಿಗೆ ಇಂದೊಂದು ಉತ್ತಮ ಅವಕಶ. ನಿಮ್ಮ ಪ್ರತಿಭೆ ಅನಾವರಣಕ್ಕೆ ಇದು ಸಕಾಲ. ಭವಿಷ್ಯದ ಆಟಗಾರರಾಗಿ ಬೆಳೆಯಲು ಈ ಸರಣಿಯನ್ನು ಸರಿಯಾಗಿ ಬಳಸಿಕೊಳ್ಳಿ. ಮೈದಾನದಲ್ಲಿ ತಮ್ಮನ್ನು ಮುಕ್ತವಾಗಿ ಬೆಳೆಯಲು ಈ ಸರಣಿ ಅನುವು ಮಾಡಿಕೊಡುತ್ತದೆ ಎಂದರು.
ಪರಿಸ್ಥಿತಿಗೆಗೆ ಅನುಗುಣವಾಗಿ ಅನುಭವಿ ಆಟಗಾರರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತೇವೆ. ಹೊಸಬರಿಗೆ ಹಾಗೆ ಮಾಡಲಾಗದು. ಏಕೆಂದರೆ ಈ ಪ್ರವಾಸ ಅವರನ್ನು ಗುರುತಿಸಬಲ್ಲದು. ಹಾಗಾಗಿ ಹೊಸ ಹುಡುಗರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಲವರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದಾರೆ.