ಸೌತಾಂಪ್ಟನ್:ಭಾರತ - ನ್ಯೂಜಿಲ್ಯಾಂಡ್ ನಡುವೆ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಗೊಳ್ಳಲಿದೆ. ಆದರೆ, ಇದಕ್ಕೆ ಮಳೆಯ ಕಾಟ ಶುರುವಾಗಿದ್ದು, ಇದೇ ಕಾರಣಕ್ಕಾಗಿ ಟಾಸ್ನಲ್ಲಿ ವಿಳಂಬವಾಗಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮಾತನಾಡಿರುವ ನ್ಯೂಜಿಲ್ಯಾಂಡ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್, ಎದುರಾಳಿ ತಂಡ ಕಟ್ಟಿಹಾಕುವ ಉದ್ದೇಶದಿಂದ ಫೈನಲ್ ಪಂದ್ಯದಲ್ಲಿ ನಾವು ವೇಗದ ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದಿದ್ದಾರೆ.
ಕೇನ್ ವಿಲಿಯಮ್ಸನ್ ಮಾತನಾಡಿರುವ ವಿಡಿಯೋ ತುಣಕವೊಂದನ್ನ ಐಸಿಸಿ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ನಾವು ಆಡುವ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಈ ಸೆಷನ್ ಆನಂದಿಸುವುದು ನಮ್ಮ ತಂಡಕ್ಕೆ ಮುಖ್ಯವಾಗಿದೆ. ಕಳೆದ ಕೆಲ ದಿನಳಿಂದ ನಮ್ಮ ಪ್ಲೇಯರ್ಸ್ ಚೆನ್ನಾಗಿ ಬ್ಯಾಟಿಂಗ್ ಮಾಡ್ತಿದ್ದು, ಬೌಲರ್ಸ್ ಕೂಡ ಉತ್ತಮ ಕೊಡುಗೆ ನೀಡಿದ್ದಾರೆ.
ನ್ಯೂಜಿಲ್ಯಾಂಡ್ ವೇಗದ ಬೌಲಿಂಗ್ ವಿಭಾಗ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಬೌಲಿಂಗ್ ವಿಭಾಗ ಚೆನ್ನಾಗಿರುವ ಕಾರಣ ಅದು ನಮಗೆ ಟ್ರಂಪ್ ಕಾರ್ಡ್. ಎದುರಾಳಿ ತಂಡ ಕಟ್ಟಿಹಾಕುವಲ್ಲಿ ಅದು ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ವಿಲಿಯಮ್ಸನ್ ತಿಳಿಸಿದ್ದಾರೆ.