ಸೌತಾಂಪ್ಟನ್:ಭಾರತ ತಂಡವನ್ನು ಮಣಿಸಿ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿ ಗೆದ್ದ ನ್ಯೂಜಿಲ್ಯಾಂಡ್ ತಂಡವನ್ನು ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಭಾರತ ನೀಡಿದ್ದ 139 ರನ್ಗಳ ಸಾಧಾರಣ ಗುರಿಯನ್ನು ನ್ಯೂಜಿಲ್ಯಾಂಡ್ ತಂಡ ಕೇನ್ ವಿಲಿಯಮ್ಸನ್(52) ಮತ್ತು ರಾಸ್ ಟೇಲರ್(47) ಅದ್ಭುತ ಜೊತೆಯಾಟದಿಂದ ಗೆಲುವು ಸಾಧಿಸಿ, ಚೊಚ್ಚಲ WTC ಟ್ರೋಫಿ ಎತ್ತಿ ಹಿಡಿದಿತ್ತು. ರವಿಶಾಸ್ತ್ರಿ ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಉತ್ತಮ ತಂಡ ಗೆಲುವು ಸಾಧಿಸಿದೆ. ವಿಶ್ವ ಮಟ್ಟದ ಟ್ರೋಫಿಗಾಗಿ ಸುದೀರ್ಘ ಸಮಯ ಕಾಯುವಿಕೆಯ ನಂತರ ಅವರು ಅರ್ಹ ಗೆಲುವು ಪಡೆದಿದ್ದಾರೆ. ದೊಡ್ಡ ಸಂಗತಿಗಳು(ಗೆಲುವು) ಸುಲಭವಾಗಿ ಸಿಗುವುದಿಲ್ಲ ಎಂಬುವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಉತ್ತಮವಾಗಿ ಆಡಿದ್ದೀರಿ ನ್ಯೂಜಿಲ್ಯಾಂಡ್, ನಿಮ್ಮ ಮೇಲೆ ಗೌರವವಿದೆ " ಎಂದು ರವಿಶಾಸ್ತ್ರಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ತಂಡದ ಆಯ್ಕೆಯಲ್ಲಿ ಎಡವಿತು. ಸೌತಾಂಪ್ಟನ್ನಲ್ಲಿ ಕಿವೀಸ್ 4 ವೇಗಿ ಮತ್ತು ಒಬ್ಬ ಮಧ್ಯಮ ವೇಗಿಯೊಂದಿಗೆ ಕಣಕ್ಕಿಳಿದರೆ, ಟೀಮ್ ಇಂಡಿಯಾ 3 ವೇಗಿ ಮತ್ತು ಇಬ್ಬರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿಕೊಂಡಿತು. ಅದರಲ್ಲಿ ಬುಮ್ರಾ ಸಂಪೂರ್ಣ ವಿಫಲರಾದರೆ, ಜಡೇಜಾ ಚಮತ್ಕಾರ ನಡೆಯಲಿಲ್ಲ. ಆದರೆ, ನ್ಯೂಜಿಲ್ಯಾಂಡ್ ತಂಡದ ಬೌಲರ್ಗಳೆಲ್ಲರೂ ಯಶಸ್ಸು ಸಾಧಿಸಿದ್ದು, ಗೆಲುವಿಗೆ ಪ್ರಮುಖ ಕಾರಣವಾಯಿತು.
ಇದನ್ನು ಓದಿ:ಫೈನಲ್ ಎಂದಿಗೂ ಒಂದೇ ಪಂದ್ಯ.. ಕೊಹ್ಲಿಯ 3 ಪಂದ್ಯಗಳ ಸಲಹೆ ಒಪ್ಪುವಂತದ್ದಲ್ಲ: ಮೈಕಲ್ ವಾನ್