ಕರ್ನಾಟಕ

karnataka

ETV Bharat / sports

ನಿವೃತ್ತಿ ಯಾವಾಗ, ಇನ್ನು ಎಷ್ಟು ವರ್ಷ ಐಪಿಎಲ್​ನಲ್ಲಿ ಆಡುತ್ತೇನೆ ಎಂಬುದನ್ನ ಖಚಿತಪಡಿಸಿದ ಯುನಿವರ್ಸಲ್ ಬಾಸ್​

ನಿವೃತ್ತಿ ಯೋಚನೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಸ್​ಗೇಲ್ " ನನ್ನಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಉಳಿದಿದೆ. ನನಗೀಗ 42 ವರ್ಷ, ಇನ್ನು ಮೂರು ವರ್ಷಗಳ ಕಾಲ ಐಪಿಎಲ್​ನಲ್ಲಿ ಆಡಲಿದ್ದೇನೆ" ಎಂದು ಹೇಳಿದ್ದಾರೆ.

ಯುನಿವರ್ಸಲ್ ಬಾಸ್​
ಯುನಿವರ್ಸಲ್ ಬಾಸ್​

By

Published : Apr 19, 2021, 5:36 PM IST

ಮುಂಬೈ: ಯುನಿವರ್ಸಲ್ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್ ತಾವೂ 45 ವರ್ಷದ ವರೆಗೆ ಐಪಿಎಲ್​ನಲ್ಲಿ ಆಡುವುದಾಗಿ ಮತ್ತು ಈ ವರ್ಷ ಪಂಜಾಬ್​ ಕಿಂಗ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಡುವುದಕ್ಕೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಸೋಮವಾರ 195ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ತಂಡ ಸೋಲುಕಂಡಿತು. ರಾಹುಲ್​ರ ನಿಧಾನಗತಿ ಬ್ಯಾಟಿಂಗ್ ಮತ್ತು ಬೌಲರ್​ಗಳ ಕಳಪೆ ಪ್ರದರ್ಶನದಿಂದ ತಂಡ 6 ವಿಕೆಟ್​ಗಳಿಂದ ಸೋಲು ಕಂಡಿತ್ತು.

ಈ ಪಂದ್ಯದ ನಂತರ ಖಾಸಗಿ ಮಾಧ್ಯಮದ ಜೊತೆ ಮಾತನಾಡುವ ವೇಳೆ ನಿವೃತ್ತಿ ಯೋಚನೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕ್ರಿಸ್​ಗೇಲ್ , " ನನ್ನಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಉಳಿದಿದೆ. ನನಗೀಗ 42 ವರ್ಷ, ಇನ್ನು ಮೂರು ವರ್ಷಗಳ ಕಾಲ ಐಪಿಎಲ್​ನಲ್ಲಿ ಆಡಲಿದ್ದೇನೆ" ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಬಲಿಷ್ಠವಾಗಿದ್ದು, 2021ರ ಐಪಿಎಲ್​ನಲ್ಲಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

4 ವರ್ಷಗಳ ಕಾಲ ಈ ಫ್ರಾಂಚೈಸಿಯಲ್ಲಿ ಕಳೆದಿರುವುದು ಅದ್ಭುತವಾಗಿತ್ತು. ಆದರೆ, ದುರದೃಷ್ಟಕರವೆಂದರೆ ಪ್ಲೇಆಫ್‌ಗೆ ಪ್ರವೇಶಿಸುವಲ್ಲಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಳ್ಳುತ್ತಿದ್ದೇವೆ. ಎರಡು ಬಾರಿ ಅವಕಾಶವನ್ನು ಕಳೆದುಕೊಂಡೆವು. ಇದೀಗ ಉತ್ತಮ ಘಟಕವನ್ನು ಹೊಂದಿದ್ದೇವೆ, ಇದರ ಕ್ರೆಡಿಟ್​ ಫ್ರಾಂಚೈಸಿ ಮಾಲೀಕರಿಗೆ ಸಲ್ಲಬೇಕು. ನಾನು ಪಂಜಾಬ್​ ತಂಡದಲ್ಲಿ ಆಡುವುದಕ್ಕೆ ಕೃತಜ್ಞನಾಗಿದ್ದೇನೆ. ಹಾಗೂ ಈ ವರ್ಷ ಐಪಿಎಲ್ ಗೆಲ್ಲಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮದೇ ದೇಶದ ನಿಕೋಲಸ್ ಪೂರನ್ ಮತ್ತು ಶಾರುಕ್ ಖಾನ್​ ಬಗ್ಗೆ ಮೆಚ್ಚುಗೆ ಮಾತನಾಡಿದ್ದು, ಇವರಿಬ್ಬರು ಪಂಜಾಬ್ ಕಿಂಗ್ಸ್​ನ ಎಕ್ಸ್​-ಫ್ಯಾಕ್ಟರ್​ ಎಂದಿದ್ದಾರೆ.

ಇದನ್ನು ಓದಿ:ಆರ್​ಸಿಬಿ ಆಪತ್ಬಾಂಧವನ ಹೆಸರಲ್ಲಿದೆ ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ

ABOUT THE AUTHOR

...view details