ಕಾನ್ಪುರ್: ಅಜಿಂಕ್ಯ ರಹಾನೆ ಎಲ್ಲರಿಗಿಂತಲೂ ಹೆಚ್ಚು ರನ್‌ಗಳಿಸಲು ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾ ಉಪ ನಾಯಕ ತಮ್ಮ ಫಾರ್ಮ್‌ಗೆ ಮರಳಲು ಇದು ಕೇವಲ ಒಂದು ಪಂದ್ಯದ ವಿಷಯವಾಗಿದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಕಾನ್ಪುರದಲ್ಲಿ ನಿನ್ನೆ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರಹಾನೆ ಮೊದಲ ಇನ್ನಿಂಗ್ಸ್‌ನಲ್ಲಿ 38 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್‌ಗಳಿಸಿದ್ದರು. ಕಳೆದ ಒಟ್ಟು 12 ಪಂದ್ಯಗಳಿಂದ 20 ರನ್‌ಗಿಂತಲೂ ಕಡಿಮೆ ಸರಾಸರಿ ಇದೆ.
ರಹಾನೆ ಅವರ ಕಳಪೆ ಫಾರ್ಮ್ ಅವರ ಕಳವಳಕ್ಕೆ ಕಾರಣವಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೋಚ್ ದ್ರಾವಿಡ್, ನೀವು ರಹಾನೆ ಹೆಚ್ಚಿನ ರನ್ ಗಳಿಸುವುದನ್ನು ಬಯಸುತ್ತೀರಿ, ಅವರೂ ಹೆಚ್ಚಿನ ರನ್ ಗಳಿಸಲು ಬಯಸುತ್ತಾರೆ. ನೀವು ಅದರ ಬಗ್ಗೆ ಚಿಂತಿಸಬೇಡಿ ಎಂದಿದ್ದಾರೆ.
ಅವರು ಗುಣಮಟ್ಟದ ಆಟಗಾರ. ಈ ಹಿಂದೆ ಅವರು ಟೀಂ ಇಂಡಿಯಾಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಗುಣಮಟ್ಟದ ಬ್ಯಾಟಿಂಗ್ ಹಾಗೂ ಅನುಭವವನ್ನು ಹೊಂದಿರುವ ಆಟಗಾರರಲ್ಲಿ ಅವರೂ ಒಬ್ಬರು. ಉತ್ತಮ ರನ್‌ಗಳಿಸುವ ಬಗ್ಗೆ ಅವರಿಗೆ ತಿಳಿದಿದೆ. ಅದು ನಮಗೂ ಗೊತ್ತಿದೆ ಎಂದು 'ದಿ ಗ್ರೇಟ್ ವಾಲ್' ಹೇಳಿದ್ದಾರೆ.