ಭಾರತ ಕ್ರಿಕೆಟ್ ತಂಡದ ದಿಗ್ಗಜ ಸುನಿಲ್ ಗವಾಸ್ಕರ್ ಅವರು ವೃತ್ತಿ ಜೀವನದಲ್ಲಿ 13,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಸಾಧನೆ ಮಾಡಿದವರು. ತಮ್ಮ ಕ್ರಿಕೆಟ್ ದಿನಗಳನ್ನು ಮೆಲುಕು ಹಾಕಿರುವ ಅವರು, ಬ್ಯಾಟಿಂಗ್ ಮಾಡುವಾಗ ಸ್ಕೋರ್ ಬೋರ್ಡ್ ನೋಡದೇ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿದ್ದ ವಿಚಾರವನ್ನು ತಿಳಿಸಿದ್ದಾರೆ. ಎಬಿಪಿ ಗ್ರೂಪ್ ಆಯೋಜಿಸಿದ್ದ INFOCOM 2022 ರ ಸಂದರ್ಭದಲ್ಲಿ 'ಸ್ಪಾಟ್‌ಲೈಟ್ ಸೆಷನ್' ವೇಳೆ ಅವರು ಮಾತನಾಡಿದರು.
ಪ್ರತಿಯೊಬ್ಬ ಬ್ಯಾಟರ್ ತನ್ನ ಗುರಿಗಳನ್ನು ತಲುಪಲು ತನ್ನದೇ ಆದ ಮಾರ್ಗ ಹೊಂದಿರುತ್ತಾನೆ. ನಿರ್ದಿಷ್ಟ ಗುರಿಯನ್ನು ತಲುಪುವ ಒತ್ತಡವನ್ನು ತೊಡೆದುಹಾಕಲು ಬ್ಯಾಟರ್, ಸ್ಕೋರ್‌ಬೋರ್ಡ್ ನೋಡದೇ ಅರ್ಹತೆಯ ಮೇಲೆ ಪ್ರತಿ ಚೆಂಡನ್ನು ಆಡಬೇಕು ಎಂದು ಗವಾಸ್ಕರ್ ಸಲಹೆ ನೀಡಿದರು.