ಕರ್ನಾಟಕ

karnataka

By

Published : Jun 27, 2021, 5:45 PM IST

ETV Bharat / sports

ಭಾರತದ ಸ್ವಿಂಗ್ ಸ್ಪೆಷಲಿಸ್ಟ್​​ರನ್ನು ಇಂಗ್ಲೆಂಡ್​ ಪ್ರವಾಸದಿಂದ ಕೈಬಿಟ್ಟಿದ್ದು ದೊಡ್ಡ ತಪ್ಪು: ಮಾಜಿ ಆಯ್ಕೆಗಾರ​

ನೀವು ಇಬ್ಬರು ಸ್ಪಿನ್ನರ್​ಗಳನ್ನು ಆಯ್ಕೆ ಮಾಡಿಕೊಂಡಿದ್ದು ಅವರು ಬ್ಯಾಟಿಂಗ್ ಮಾಡುತ್ತಾರೆ ಎಂಬ ಕಾರಣಕ್ಕೆ. ಆದರೆ, ಬ್ಯಾಟಿಂಗ್ ಮಾಡಬಲ್ಲ ಏಕೈಕ ವೇಗದ ಬೌಲರ್​ ಶಾರ್ದುಲ್ ಠಾಕೂರ್​ ಅವರು ಆಡುವ 15ರ ಬಳಗದಲ್ಲಿರಬೇಕಿತ್ತು. ಅಲ್ಲದೆ ವಾತಾವರಣ ಬದಲಾದ ನಂತರ ಅವರನ್ನು 11ರ ಬಳಗದಲ್ಲೂ ಆಡಿಸಬಹುದಿತ್ತು ಎಂದಿದ್ದಾರೆ..

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್
ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್

ನವದೆಹಲಿ :ಇಂಗ್ಲೆಂಡ್​ ಪ್ರವಾಸದಲ್ಲಿ ಬೆಸ್ಟ್​ ಸ್ವಿಂಗ್ ಬೌಲರ್‌ನ ತಂಡಕ್ಕೆ ಆಯ್ಕೆ ಮಾಡಿಕೊಳ್ಳದಿರುವುದು ದೊಡ್ಡ ಪ್ರಮಾದ ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದ 15 ಸದಸ್ಯರ ತಂಡದಲ್ಲಿ ಶಾರ್ದುಲ್ ಠಾಕೂರ್ ಇರಬೇಕಿತ್ತು ಎಂದು ಮಾಜಿ ಆಯ್ಕೆ ಸಮಿತಿ ಸದಸ್ಯ ಸರಂದೀಪ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ವೇಗದ ಬೌಲರ್​ಗಳಿಗೆ ಅನುಕೂಲವಾಗುವ ಸೌತಾಂಪ್ಟನ್​ನಲ್ಲಿ ವೇಗದ ಆಲ್​ರೌಂಡರ್ ​ಶಾರ್ದುಲ್ ಠಾಕೂರ್​ ಅವರನ್ನು ಕೇವಲ 15ರ ಬಳಗದಲ್ಲಿ ಅಲ್ಲದೇ ಆಡುವ 11ರ ತಂಡದಲ್ಲೂ ಅವಕಾಶ ನೀಡಬೇಕಿತ್ತು. ಮಳೆಯಿಂದ ಪಂದ್ಯ ಪುನಾರಂಭವಾದಾಗ ಪೇಸರ್​ಗಳಿಗೆ ಆ ಪಿಚ್​ ಅನುಕೂಲಕರವಾಗುತ್ತಿತ್ತು ಎಂದು ಕೆಲವು ಕ್ರಿಕೆಟ್ ತಜ್ಞರು ಕೂಡ ಹೇಳಿದ್ದಾರೆ.

ಪಂದ್ಯಾರಂಭಕ್ಕೂ ಮುನ್ನ ಇಬ್ಬರು ಸ್ಪಿನ್ನರ್​ಗಳನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದ್ದು ಸರಿಯಾಗಿಯೇ ಇತ್ತು. ಆದರೆ, ಮಳೆಯ ನಂತರ ವೇಗಿಗಳಿಗೆ ಪರಿಸ್ಥಿತಿ ಅನುಕೂಲವಾಗುವುದರಿಂದ ತಂಡವನ್ನು ಬದಲಿಸಿಕೊಳ್ಳಬೇಕಿತ್ತು ಎಂದು ಪಿಟಿಐಗೆ ಸರಂದೀಪ್ ತಿಳಿಸಿದ್ದಾರೆ.

ನೀವು ಇಬ್ಬರು ಸ್ಪಿನ್ನರ್​ಗಳನ್ನು ಆಯ್ಕೆ ಮಾಡಿಕೊಂಡಿದ್ದು ಅವರು ಬ್ಯಾಟಿಂಗ್ ಮಾಡುತ್ತಾರೆ ಎಂಬ ಕಾರಣಕ್ಕೆ. ಆದರೆ, ಬ್ಯಾಟಿಂಗ್ ಮಾಡಬಲ್ಲ ಏಕೈಕ ವೇಗದ ಬೌಲರ್​ ಶಾರ್ದುಲ್ ಠಾಕೂರ್​ ಅವರು ಆಡುವ 15ರ ಬಳಗದಲ್ಲಿರಬೇಕಿತ್ತು. ಅಲ್ಲದೆ ವಾತಾವರಣ ಬದಲಾದ ನಂತರ ಅವರನ್ನು 11ರ ಬಳಗದಲ್ಲೂ ಆಡಿಸಬಹುದಿತ್ತು ಎಂದಿದ್ದಾರೆ.

ಜೊತೆಗೆ ಫಿಟ್​ ಆಗಿರುವ ಭುವಬೇಶ್ವರ್​ ಕುಮಾರ್​ ಅವರನ್ನು ತಂಡದಿಂದ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡದಿರುವುದು ಒಂದು ದೊಡ್ಡ ತಪ್ಪು. ಏಕೆಂದರೆ, ಅವರು ಭಾರತದ ಅತ್ಯುತ್ತಮ ಸ್ವಿಂಗ್ ಬೌಲರ್​. ಅಲ್ಲದೆ ನೀವು ಯಾವಾಗಲೂ ಫಿಟ್​ನೆಸ್​ ಇಲ್ಲದ ಹಾರ್ದಿಕ್ ಪಾಂಡ್ಯರ ಮೇಲೆ ಅವಲಂಬಿತರಾಗಲಾಗುವುದಿಲ್ಲ. ಬದಲಾಗಿ ವಿಜಯ್ ಶಂಕರ್ ಅಥವಾ ಶಾರ್ದುಲ್​ ಅಥವಾ ಶಿವಂ ದುಬೆ ಅವರನ್ನು ಬೆಳೆಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್​​ನ ದುರ್ಬಲ ಬ್ಯಾಟಿಂಗ್​​ನಿಂದ ಟೀಂ ಇಂಡಿಯಾ ಸೋಲಿಸುವುದು ಕಠಿಣ: ವಾನ್‌

ABOUT THE AUTHOR

...view details