ನವದೆಹಲಿ :ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಟೆಸ್ಟ್ ತಂಡ ವಿದೇಶಿ ನೆಲದಲ್ಲಿ ತಮ್ಮನ್ನು ತಾವು ಪ್ರಬಲವೆಂದು ಸಾಬೀತುಪಡಿಸದಿದ್ದರೂ, ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ಗೆಲುವು ಇತರೆ ತಂಡಗಳ ವಿದೇಶಿ ಫಲಿತಾಂಶದ ಜೊತೆ ಹೋಲಿಕೆಗೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ 2018ರಲ್ಲಿ ಭಾರತ ತಂಡ ಟೆಸ್ಟ್ ಸರಣಿ ಕೈಚೆಲ್ಲಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು, ಪ್ರಾಬಲ್ಯ ಮೆರೆದಿದೆ.
ಆದರೆ, ವೆಸ್ಟ್ ಇಂಡೀಸ್ ತಂಡ 1984ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಸರಣಿ ಜಯಿಸಿತ್ತು. 1985-86ರಲ್ಲಿ ವಿಂಡೀಸ್ ತಂಡ 11 ಟೆಸ್ಟ್ ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿ ಆಸ್ಟ್ರೇಲಿಯಾ ವಿರುದ್ಧ 1-1ರಿಂದ ಡ್ರಾ ಮಾಡಿಕೊಂಡಿತ್ತು. 1979-80ರಿಂದ 1988-89ರಲ್ಲಿ ವೆಸ್ಟ್ ಇಂಡೀಸ್ ಆಡಿದ 20 ಪಂದ್ಯದಲ್ಲಿ 14ರಲ್ಲಿ ಗೆಲುವು ಕಂಡಿತ್ತು.