ಕರ್ನಾಟಕ

karnataka

ETV Bharat / sports

ಮಹತ್ವದ ಪ್ರವಾಸದ ಸಂದರ್ಭದಲ್ಲಿ ಕಿತ್ತಾಟ ಒಳ್ಳೆಯದಲ್ಲ, ಕ್ರಿಕೆಟ್​ ಕಡೆಗೆ ಗಮನ ನೀಡಿ: ಕೊಹ್ಲಿಗೆ ಕಪಿಲ್​ ಬುದ್ಧಿಮಾತು

ಮಹತ್ವದ ವಿದೇಶ ಪ್ರವಾಸ ಕೈಗೊಳ್ಳುವ ಈ ಸಮಯದಲ್ಲಿ ಯಾರ ಮೇಲೂ ಬೆರಳು ಮಾಡಿ ತೋರಿಸುವುದು ಒಳ್ಳೆಯದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಬರುತ್ತಿದೆ ಮತ್ತು ದಯವಿಟ್ಟು ಪ್ರವಾಸದತ್ತ ಗಮನ ಹರಿಸಿ ಎಂದು ಕಪಿಲ್​ ದೇವ್​ ಹೇಳಿದ್ದಾರೆ.

Kapil dev on Virat kohli
Kapil dev on Virat kohli

By

Published : Dec 16, 2021, 6:50 PM IST

Updated : Dec 16, 2021, 7:03 PM IST

ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹಲವಾರು ಸ್ಫೋಟಕ ಹೇಳಿಕೆ ನೀಡಿರುವ ವಿರಾಟ್​ ಕೊಹ್ಲಿ ನಡೆಯನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್​ ಟೀಕಿಸಿದ್ದು, ಬೇರೆಯವರ ಕಡೆಗೆ ಬೊಟ್ಟು ಮಾಡಿ ತೋರಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.

ನವೆಂಬರ್​ನಲ್ಲಿ ವಿರಾಟ್ ಕೊಹ್ಲಿ ಟಿ-20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು. ವಿಶ್ವಕಪ್​ ನಂತರ ನಾಯಕತ್ವ ತ್ಯಜಿಸಿದ್ದರು. ಆದರೆ, ವಿರಾಟ್​ ಅವರನ್ನು ಕಳೆದ ವಾರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್​ ತಂಡವನ್ನು ಪ್ರಕಟಿಸಿದ್ದ ವೇಳೆ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಸಲಾಗಿತ್ತು.

ಆದರೆ, ಕಳೆದ ಎರಡೂ ದಿನಗಳ ಹಿಂದೆ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಬಿಸಿಸಿಐ ಅಧ್ಯಕ್ಷ ಗಂಗೂಲಿ, " ಕೊಹ್ಲಿಗೆ ನಾನು ಸ್ವತಃ ಕರೆ ಮಾಡಿ ಟಿ-20 ನಾಯಕತ್ವ ಬಿಡುವುದು ಬೇಡ ಎಂದಿದ್ದೆ, ಆದರೆ ಅವರು ಒಪ್ಪಲಿಲ್ಲ, ಆಯ್ಕೆ ಸಮಿತಿ ಸೀಮಿತ ಓವರ್​ಗಳ ತಂಡಕ್ಕೆ ಇಬ್ಬರು ನಾಯಕ ಬೇಡ ಎಂದು ನಿರ್ಧರಿಸಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಕೊಂಡಿದ್ದರು ಎಂದು ತಿಳಿಸಿದ್ದರು.

ಗಂಗೂಲಿ ಈ ಹೇಳಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ತಾವೂ ಟಿ20 ನಾಯಕತ್ವ ತ್ಯಜಿಸಿದ ವೇಳೆ ಯಾರೊಬ್ಬರು ನನ್ನ ನಿರ್ಧಾರವನ್ನು ಪರಿಶೀಲಿಸುವಂತೆ ಹೇಳಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು.

ಈ ಸಮಯದಲ್ಲಿ ಯಾರ ಮೇಲೂ ಬೆರಳು ಮಾಡಿ ತೋರಿಸುವುದು ಒಳ್ಳೆಯದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಬರುತ್ತಿದೆ ಮತ್ತು ದಯವಿಟ್ಟು ಪ್ರವಾಸದತ್ತ ಗಮನ ಹರಿಸಿ ಎಂದು ಕಪಿಲ್​ ದೇವ್​ ಸಲಹೆ ನೀಡಿದ್ದಾರೆ.

ಬಿಸಿಸಿಐನ ಅಧ್ಯಕ್ಷ ಸ್ಥಾನ ಬೋರ್ಡ್​ನಲ್ಲೇ ಅತ್ಯಂತ ಮಹತ್ವದ ಸ್ಥಾನ, ಹಾಗೆಯೇ ಭಾರತ ತಂಡದ ನಾಯಕನ ಸ್ಥಾನವೂ ಮಹತ್ವದ್ದಾಗಿದೆ. ಸಾರ್ವಜನಿಕವಾಗಿ ಇಬ್ಬರೂ ಕಿತ್ತಾಡುವುದು ಒಳ್ಳೆಯ ಸಂಗತಿಯಲ್ಲ ಎಂದು ನಾನು ಭಾವಿಸುತ್ತೇನೆ. ಅದು ಸೌರವ್ ಮತ್ತು ಕೊಹ್ಲಿ ಯಾರಿಗಾದರೂ ಇದು ಶೋಭೆ ತರುವುದಿಲ್ಲ" ಎಂದು 1983ರ ವಿಶ್ವಕಪ್​ ನಾಯಕ ಹೇಳಿದ್ದಾರೆ.

ಕೊಹ್ಲಿ ದೇಶದ ಬಗ್ಗೆ ಯೋಚಿಸಬೇಕು

" ಪರಿಸ್ಥಿತಿಗಳನ್ನು ನಿಯಂತ್ರಣಕ್ಕೆ ತರುವುದನ್ನು ನೋಡಿ ಮತ್ತು ಎಲ್ಲಕ್ಕಿಂತ ಮೊದಲು ದೇಶದ ಪರ ಆಡುವುದರ ಪರ ಆಲೋಚಿಸಿ. ತಪ್ಪು ಎಲ್ಲಾಗಿದೆ ಎಂಬುದು ಖಂಡಿತಾ ನಾಳೆ ತಿಳಿಯಲಿದೆ. ಆದರೆ, ಈ ವಿಚಾರವಾಗಿ ವಿದೇಶಿ ಪ್ರವಾಸಕ್ಕೂ ಮುನ್ನ ವಿವಾದವನ್ನುಂಟು ಮಾಡುವುದು ಒಳ್ಳೆಯದಲ್ಲ " ಎಂದು ಕಪಿಲ್​ ದೇವ್​ ಹೇಳಿದ್ದಾರೆ.

ಇದನ್ನೂ ಓದಿ:ನೋ ಕಮೆಂಟ್ಸ್​, ಬಿಸಿಸಿಐ ಸೂಕ್ತ ರೀತಿಯಲ್ಲಿ ಇದನ್ನು ಡೀಲ್ ಮಾಡಲಿದೆ: ಕೊಹ್ಲಿ ಹೇಳಿಕೆಗೆ ಗಂಗೂಲಿ ಪ್ರತಿಕ್ರಿಯೆ

Last Updated : Dec 16, 2021, 7:03 PM IST

ABOUT THE AUTHOR

...view details