ಮುಂಬೈ :ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ತಮ್ಮ ನೆಚ್ಚಿನ ಸಾರ್ವಕಾಲಿಕ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.
ಅದರಲ್ಲಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ಗೆ ಅವಕಾಶ ನೀಡಿದ್ದರೆ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾರನ್ನೇ ಕಡೆಗಣಿಸಿದ್ದಾರೆ.
ಭಾನುವಾರ ಕ್ರಿಕ್ಬಜ್ ವೆಬ್ಸೈಟ್ನಲ್ಲಿ ಹರ್ಷಬೊಗ್ಲೆ ಅವರ ಜೊತೆ ಸಂವಾದ ನಡೆಸುವ ವೇಳೆ ಸಾರ್ವಕಾಲಿಕ ಐಪಿಎಲ್ ತಂಡವನ್ನು ಹೆಸರಿಸುವಂತೆ ಹೇಳಲಾಗಿತ್ತು. ಜೊತೆಗೆ ಸ್ವತಃ ತಮ್ಮನ್ನು ತಂಡದಲ್ಲಿ ಸೇರಿಸಿಕೊಳ್ಳುವ ಷರತ್ತು ವಿಧಿಸಲಾಗಿತ್ತು.
ಅದರಂತೆ ಆರಂಭಿಕರಾಗಿ ತಮ್ಮ ಜೊತೆಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದ್ದಾರೆ. 3 ಮತ್ತು 4ನೇ ಸ್ಥಾನಕ್ಕೆ ಆರ್ಸಿಬಿಯ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ 5ನೇ ಸ್ಥಾನಕ್ಕೆ ಸಿಎಸ್ಕೆ ತಂಡದ ಎಂಎಸ್ ಧೋನಿಯನ್ನು ಆಯ್ಕೆ ಮಾಡಿದ್ದಾರೆ.
ಕೆಳ ಕ್ರಮಾಂಕದಲ್ಲಿ ಟಿ20 ಸ್ಪೆಷಲಿಸ್ಟ್ ಕಿರನ್ ಪೊಲಾರ್ಡ್ ಹಾಗೂ ಆಲ್ರೌಂಡರ್ ಸ್ಥಾನಕ್ಕೆ ರವೀಂದ್ರ ಜಡೇಜಾರನ್ನು ಹೆಸರಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಲಸಿತ್ ಮಾಲಿಂಗ ಮತ್ತು ಭುವನೇಶ್ವರ್ ಕುಮಾರ್ರನ್ನು ವೇಗದ ಬೌಲರ್ಗಳಾಗಿ, ಸ್ಪಿನ್ನರ್ ಜಾಗಕ್ಕೆ ಹರ್ಭಜನ್ರನ್ನು ಆಯ್ಕೆ ಮಾಡಿದ್ದಾರೆ.
ಆದರೆ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮತ್ತು ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಡೇವಿಡ್ ವಾರ್ನರ್, ಶಿಖರ್ ಧವನ್, ಅಮಿತ್ ಮಿಶ್ರಾ ಅಂತಹ ಪ್ರಸಿದ್ಧ ಆಟಗಾರರು ಈ ತಂಡದಲ್ಲಿ ಮಿಸ್ ಆಗಿವೆ ಎಂದು ಕೆಲವು ಕ್ರೀಡಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಜೋಸ್ ಬಟ್ಲರ್ ಸಾರ್ವಕಾಲಿಕ ಐಪಿಎಲ್ ತಂಡ
ಜೋಸ್ ಬಟ್ಲರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಎಂಎಸ್ ಧೋನಿ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ
ಇದನ್ನು ಓದಿ:ಕೊಹ್ಲಿ ಪರ ಪರ ಮಾತನಾಡಿದ ಪಾಕ್ ಕ್ರಿಕೆಟರ್ಗೆ ಫಿಕ್ಸರ್ ಎಂದು ಹೀಯಾಳಿಸಿದ ಮೈಕಲ್ ವಾನ್