ಜೋಹಾನ್ಸ್‌ಬರ್ಗ್: ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಆಕ್ರಮಣಕಾರಿ ಅಥವಾ ಸಕಾರಾತ್ಮಕ ಮನೋಭಾವದ ಸಂಬಂಧ ಸದ್ಯ ಅವರಿಗೆ ನಾವು ಯಾರೂ ಕೂಡ ಸಲಹೆ, ಸೂಚನೆ ನೀಡುವುದಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಭಾರತದ 7 ವಿಕೆಟ್ಗಳಿಂದ ಜೋಹಾನ್ಸ್‌ಬರ್ಗ್ ಟೆಸ್ಟ್ ಗೆದ್ದಿರುವ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲೇ ಪಂತ್ ಅನಗತ್ಯ ಹೊಡೆತಕ್ಕೆ ಮುಂದಾಗಿ ಮೂರು ಎಸೆತಗಳಲ್ಲೇ ಡಕ್‌ಗೆ ಔಟ್ ಆಗಿದ್ದರು. ಆಫ್ ಸ್ಟಂಪ್‌ನ ಹೊರಗಿದ್ದ ಎಸೆತವನ್ನು ಕ್ರಿಸ್ನಿಂದ ಮುಂದೆ ಬಂದು ಬಾರಿಸಲು ಯತ್ನಿಸಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದರು. ಈ ಬಗ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.
ಪಂದ್ಯದ ಬಳಿಕ ಮಾತನಾಡಿರುವ ಕೋಚ್ ದ್ರಾವಿಡ್, ರಿಷಭ್ ಸಕಾರಾತ್ಮಕ ಮನೋಭಾವದ ಆಟಗಾರ ಎಂಬುದು ನಮಗೆ ತಿಳಿದಿದೆ. ಪಂತ್ ಆಟದ ಶೈಲಿಯೇ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಆದರೆ, ಖಂಡಿತವಾಗಿಯೂ ನಾವು ಅವರೊಂದಿಗೆ ಕೆಲ ವಿಚಾರದ ಬಗ್ಗೆ ಮಾತುಕತೆ ನಡೆಸುತ್ತೇವೆ.
ಬಹುಶಃ ಅದಕ್ಕೆ ಸೂಕ್ತ ಸಮಯ ಬರಬೇಕಿದೆ. ರಿಷಭ್‌ಗೆ ಧನಾತ್ಮಕ ಅಥವಾ ಆಕ್ರಮಣಕಾರಿ ಆಟವಾಡಬೇಡಿ ಎಂದು ಯಾರೂ ಹೇಳುವುದಿಲ್ಲ. ಆದರೆ ಕೆಲವೊಮ್ಮೆ ಸಮಯವಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದು ದ್ರಾವಿಡ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇನ್ನೂ ಕಲಿಕಾ ಹಂತದಲ್ಲಿದ್ದಾರೆ: