ಕರ್ನಾಟಕ

karnataka

ETV Bharat / sports

'ವಿಶ್ರಾಂತಿ​ ಬೇಕಿದ್ದರೆ ಐಪಿಎಲ್ ವೇಳೆ ಪಡೆಯಲಿ..': ಟೀಂ ಇಂಡಿಯಾ ವಿರುದ್ಧ ಮದನ್ ಲಾಲ್‌ ಕಿಡಿ - ರೋಹಿತ್​ ಶರ್ಮಾ ಹೇಳಿಕೆ

ಈ ಕ್ರಿಕೆಟ್‌ ತಂಡದಲ್ಲಿ ದೇಶಕ್ಕಾಗಿ ಆಡುವ ಉತ್ಸಾಹ ಕಾಣೆಯಾಗಿದೆ ಎಂದು 1983ರ ವಿಶ್ವಕಪ್​ ವಿಜೇತ ತಂಡದ ಸದಸ್ಯ ಮದನ್​ ಲಾಲ್​ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

no-intensity-or-passion-in-this-indian-team-madan-lal
'ಕ್ರಿಕೆಟ್​ ತಂಡದಲ್ಲಿ ದೇಶಕ್ಕಾಗಿ ಆಡುವ ಉತ್ಸಾಹ ಕಾಣೆ, ವಿಶ್ರಾಂತಿ​ ಬೇಕಾದರೆ ಐಪಿಎಲ್​ನಲ್ಲಿ ಪಡೆಯಿರಿ'

By

Published : Dec 9, 2022, 4:51 PM IST

ನವ ದೆಹಲಿ: ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿ ಸೋತಿರುವ ಟೀಂ ಇಂಡಿಯಾದ ವಿರುದ್ಧ ಮಾಜಿ ಕ್ರಿಕೆಟಿಗ, ಕೋಚ್​ ಮದನ್​ ಲಾಲ್​ ಟೀಕಾಪ್ರಹಾರ ನಡೆಸಿದ್ದಾರೆ. ಭಾರತ ತಂಡವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಕೆಲ ವರ್ಷಗಳಿಂದಲೂ ತಂಡದಲ್ಲಿ ತೀಕ್ಷ್ಣತೆ ಮತ್ತು ಉತ್ಸಾಹವನ್ನು ನಾನು ನೋಡುತ್ತಿಲ್ಲ ಎಂದು ಕಿಡಿಕಾರಿದರು.

ಇದು ಟೀಂ ಇಂಡಿಯಾ ರೀತಿ ಕಾಣುತ್ತಿಲ್ಲ. ದೇಶಕ್ಕಾಗಿ ಆಡುವ ಉತ್ಸಾಹ ಕಾಣೆಯಾಗಿದೆ. ಆಟಗಾರರು ದಣಿದಿದ್ದಾರೋ ಅಥವಾ ಸುಮ್ಮನೆ ಮುಂದೆ ಹೋಗುತ್ತಿದ್ದಾರೋ ಗೊತ್ತಿಲ್ಲ. ಇದೊಂದು ಗಂಭೀರ ವಿಷಯ ಎಂದು ಮದನ್​ ಹೇಳಿದ್ದಾರೆ.

ಅರ್ಧ ಫಿಟ್ ಆಗಿರುವ ಆಟಗಾರರನ್ನು ತಂಡ ಹೊಂದಲು ಸಾಧ್ಯವಿಲ್ಲ ಎಂಬ ನಾಯಕ ರೋಹಿತ್​ ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ತುಂಬಾ ಬೇಸರದ ಸಂಗತಿ. ಇಂತಹ ಹೇಳಿಕೆಯನ್ನು ನಾಯಕ ಹೇಳುತ್ತಿರುವುದು ಗಮನಿಸಿದರೆ, ಎಲ್ಲೋ, ಏನೋ ತಪ್ಪಾಗಿರುವಂತೆ ಭಾಸವಾಗುತ್ತದೆ ಎಂದಿದ್ದಾರೆ.

ಇದಕ್ಕೆ ಯಾರು ಹೊಣೆ?. ಇದಕ್ಕೆ ತರಬೇತುದಾರರು ಜವಾಬ್ದಾರಿಯೋ?. ಯಾಕೆ ಅನ್​ಫಿಟ್​ ಆಟಗಾರರು ಆಡಲು ಹೋಗುತ್ತಿದ್ದಾರೆ?. ನೀವು ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವನ್ನು ಆಡಲು ಹೋಗುತ್ತಿದ್ದೀರಿ, ಅದರ ಫಲಿತಾಂಶ ಕೂಡ ಇದೀಗ ನಿಮ್ಮ ಕಣ್ಣ ಮುಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಐಪಿಎಲ್​ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಿರಿ:ಆಟಗಾರರಿಗೆ ವಿಶ್ರಾಂತಿ​ ಬೇಕಾದರೆ ಐಪಿಎಲ್​ ಪಂದ್ಯಗಳ ಸಂದರ್ಭದಲ್ಲಿ ಪಡೆಯಲಿ. ದೇಶ ಮೊದಲು. ನೀವು ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಹೋಗದಿದ್ದರೆ, ರಾಷ್ಟ್ರದ ಕ್ರಿಕೆಟ್ ಅಧೋಗತಿಗೆ ಹೋಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆಕ್ರಮಣಕಾರಿ ಪ್ರದರ್ಶನ ಬಾರದ ಬಗ್ಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ಆಟಗಾರರು ಕಳೆದ ಮೂರು ವರ್ಷಗಳಲ್ಲಿ ಎಷ್ಟು ಶತಕಗಳನ್ನು ಗಳಿಸಿದ್ದಾರೆ?. ಕಳೆದ ಒಂದು ವರ್ಷದಲ್ಲಿ ಎಷ್ಟು ಶತಕಗಳನ್ನು ಬಾರಿಸಿದ್ದಾರೆ?. ವಯಸ್ಸಿನೊಂದಿಗೆ ಕೈ ಮತ್ತು ಕಣ್ಣಿನ ಸಮನ್ವಯ ನಿಧಾನಗೊಳ್ಳುತ್ತಿದೆ. ಆದರೆ, ಅವರು ಅನುಭವಿ ಆಟಗಾರರು. ಅವರು ಪ್ರದರ್ಶನ ನೀಡಬೇಕಿತ್ತು. ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಗೆಲ್ಲಲಾಗದು ಎಂದು ಹೇಳಿದ್ದಾರೆ.

ಇದನ್ನು ಓದಿ:ಮೂರನೇ ಏಕದಿನಕ್ಕೆ ಕುಲ್​ದೀಪ್​ಗೆ ಬುಲಾವ್​: ಮುಂಬೈಗೆ ಮರಳಿರುವ ರೋಹಿತ್

ABOUT THE AUTHOR

...view details