ಕರ್ನಾಟಕ

karnataka

ETV Bharat / sports

ಭಾರತ ಟಿ20 ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕನಾದರೆ ಉತ್ತಮ: ರವಿಶಾಸ್ತ್ರಿ

ವಿಶ್ವಕಪ್​ ವೈಫಲ್ಯದ ಬಳಿಕ ಭಾರತ ತಂಡದಲ್ಲಿ ನಾಯಕ ಸೇರಿದಂತೆ ಆಟಗಾರರ ಬದಲಾವಣೆಯ ಅಗತ್ಯದ ಬಗ್ಗೆ ಹಿರಿಯ ಆಟಗಾರರು ಸಲಹೆ ನೀಡಿದ್ದಾರೆ. ಯುವಪಡೆ ಕಟ್ಟುವ ಬಗ್ಗೆ ರವಿಶಾಸ್ತ್ರಿ ಕೂಡ ಮಾತನಾಡಿದ್ದಾರೆ.

Ravi Shastri on Hardik Pandya
ರವಿಶಾಸ್ತ್ರಿ

By

Published : Nov 17, 2022, 7:48 PM IST

ವೆಲ್ಲಿಂಗ್ಟನ್:ಟಿ20 ಮಾದರಿಗೆ ಪ್ರತ್ಯೇಕ ನಾಯಕನ ಅಗತ್ಯದ ಬಗ್ಗೆ ಹೇಳಿದ್ದ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್​ ಸಲಹೆಯನ್ನು ಭಾರತ ತಂಡದ ಮಾಜಿ ತರಬೇತುದಾರ ರವಿಶಾಸ್ತ್ರಿ ಅನುಮೋದಿಸಿದ್ದಾರೆ. ತಂಡದ ಬಲವರ್ಧನೆಗೆ ನಾಯಕನ ಬದಲು ಮಾಡಬಹುದು. ಹಾರ್ದಿಕ್ ​ಪಾಂಡ್ಯ ನಾಯಕನ ಸ್ಥಾನ ತುಂಬುವಲ್ಲಿ ಸಮರ್ಥ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಟಿ20ಗೆ ಪ್ರತ್ಯೇಕ ನಾಯಕನ ನೇಮಕದಿಂದ ಯಾವುದೇ ಹಾನಿಯಾಗುವುದಿಲ್ಲ. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಇದಕ್ಕೆ ಸೂಕ್ತ ಆಟಗಾರ. ನಾಯಕನ ಬದಲಿ ತಂಡವನ್ನು ಬಲಪಡಿಸಲಿದೆ. ಮೂರು ಪ್ರಕಾರದ ಕ್ರಿಕೆಟ್​ ಅನ್ನು ಒಬ್ಬ ನಾಯಕ ನಿಭಾಯಿಸುವುದು ಕಷ್ಟ. ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನದ ನೇತೃತ್ವ ವಹಿಸಿಕೊಂಡರೆ, ಟಿ20 ಮಾದರಿಗೆ ಹೊಸ ನಾಯಕನ ನೇಮಕ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

ವಿವಿಎಸ್​ ಲಕ್ಷ್ಮಣ್​ ಅವರು ನೀಡಿದ ಸಲಹೆ ಉತ್ತಮವಾಗಿದೆ. ತಂಡಕ್ಕೆ ಟಿ20 ಸ್ಪೆಷಲಿಸ್ಟ್​ ಆಟಗಾರರು ಬೇಕು. ಯುವಕರನ್ನು ಈಗಿನಿಂದಲೇ ಹುರಿಗೊಳಿಸಬೇಕಿದೆ. ಯುವಪಡೆಯನ್ನೇ ತಜ್ಞ ಆಟಗಾರರನ್ನಾಗಿ ಬೆಳೆಸಬೇಕಿದೆ. ತಂಡ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್​ನಲ್ಲಿ ಮಿಂಚಬೇಕು ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಹಿರಿಯ ಆಟಗಾರರ ವಿಶ್ರಾಂತಿಯಲ್ಲಿ ಸ್ಥಾನ ಪಡೆದಿರುವ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್‌ ಅವಕಾಶವನ್ನು ಬಳಸಿಕೊಳ್ಳಬೇಕು. ತಮ್ಮ ಸಾಮರ್ಥ್ಯ ಸಾಬೀತು ಮಾಡಿ ತಂಡದಲ್ಲಿ ಭದ್ರ ಸ್ಥಾನ ಪಡೆಯಬೇಕು. ಮುಂದಿನ ಟಿ20 ವಿಶ್ವಕಪ್​ಗೆ ತಂಡ ಯುವಕರಿಂದ ಕೂಡಿರಬೇಕು ಎಂದು ರವಿಶಾಸ್ತ್ರಿ ಹೇಳಿದರು.

ವಿದೇಶಿ ಲೀಗ್​ಗಳ ಅಗತ್ಯವಿಲ್ಲ:ಬಿಗ್​ ಬ್ಯಾಷ್​, ಪಾಕಿಸ್ತಾನ ಪ್ರೀಮಿಯರ್​ ಲೀಗ್​, ಕೆರೆಬಿಯನ್​ ಲೀಗ್​ಗಳಲ್ಲಿ ಭಾರತೀಯರು ಭಾಗವಹಿಸಲು ಅನುಮತಿ ನೀಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರವಿಶಾಸ್ತ್ರಿ, ಇದರ ಅಗತ್ಯವೇ ಇಲ್ಲ. ಆಟಗಾರರು ಬಿಡುವಿಲ್ಲದ ಕ್ರಿಕೆಟ್​ ಆಡುತ್ತಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಅನುಭವವೇ ಸಾಕು. ಸಾಗರೋತ್ತರ ಲೀಗ್​ಗಳ ಅಗತ್ಯ ಭಾರತೀಯರಿಗಿಲ್ಲ ಎಂದು ಅಭಿಪ್ರಾಯಪಟ್ಟರು.

ಓದಿ:ಟಿ20ಗೆ ಬ್ಯಾಟ್​ ಬಾಲ್​ ಮಾಡುವ ಸ್ಪೆಷಲಿಸ್ಟ್​ಗಳು ತಂಡಕ್ಕೆ ಅಗತ್ಯ: ವಿವಿಎಸ್​ ಲಕ್ಷ್ಮಣ್​

ABOUT THE AUTHOR

...view details