ಮುಂಬೈ: ಜೂನ್ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎರಡು ತಂಡಗಳು ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿವೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟ್ಟೇಟರ್ ಸಂಜಯ್ ಮಂಜ್ರೇಕರ್ ಈ ಮಹತ್ವದ ಪಂದ್ಯಕ್ಕೆ ತಮ್ಮ ಇಷ್ಟವಾದ ತಂಡವನ್ನು ಘೋಷಿಸಿದ್ದು, ಅದರಲ್ಲಿ ರವೀಂದ್ರ ಜಡೇಜಾ ಮತ್ತು 100 ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವವುಳ್ಳ ಇಶಾಂತ್ ಶರ್ಮಾರನ್ನು ಹೊರಗಿಟ್ಟು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.
2019ರ ಏಕದಿನ ವಿಶ್ವಕಪ್ ವೇಳೆ ಜಡೇಜಾ ಮೇಲೆ ವಿವಾದಾದ್ಮಕ ಕಮೆಂಟ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೀಡಾಗಿದ್ದರು. ಇದಲ್ಲದೇ ಸ್ವತಃ ಜಡೇಜಾ ಕೂಡ ನಾನು ಈಗಲೂ ನಿಮಗಿಂತ ಹೆಚ್ಚು ಪಂದ್ಯಗಳನ್ನಾಡಿದ್ದೇನೆ ಎಂದು ಬಹಿರಂಗವಾಗಿಯೇ ದಾಳಿ ನಡೆಸಿದ್ದರು.
ಇದನ್ನು ಓದಿ:ಸಾಧನೆ ಮಾಡಿದವರನ್ನ ಗೌರವದಿಂದ ಕಾಣಿ... ಮಾತಿನ ಮಲ್ಲ ಮಂಜ್ರೇಕರ್ ವಿರುದ್ಧ ಸಿಡಿದೆದ್ದ ಜಡೇಜಾ!
ಇದೀಗ ವಿಶ್ವವೇ ಎದುರು ನೋಡುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಕೂಡ ಅವರನ್ನು ಮತ್ತೆ ಕಡೆಗಣಿಸಿದ್ದಾರೆ. ಆದರೆ, ತಾವೂ ಇಂಗ್ಲಿಷ್ ಪರಿಸ್ಥಿತಿಗೆ ಅನುಗುಣವಾಗಿ ತಂಡ ಆಯ್ಕೆ ಮಾಡಿರುವುದಾಗಿ ಜಡೇಜಾ ಮತ್ತು ಇಶಾಂತ್ ಶರ್ಮಾರನ್ನು ಕೈಬಿಟ್ಟಿರುವುದಕ್ಕೆ ಸಮರ್ಥನೆ ನೀಡಿದ್ದಾರೆ.