ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಪ್ರವೇಶ ಪಡೆಯಲು ಶ್ರೀಲಂಕಾ ನ್ಯೂಜಿಲೆಂಡ್ನಲ್ಲಿ 2-0ಯಿಂದ ಸರಣಿ ವಶಪಡಿಸಿಕೊಳ್ಳ ಬೇಕಿತ್ತು. ಆದರೆ ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್‌ನಲ್ಲಿ ಸಿಂಹಳೀಯರು ವೈಟ್ ವಾಷ್ ಆಗಿದೆ. ನ್ಯೂಜಿಲೆಂಡ್ ಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿ ಸರಣಿ ವಶಪಡಿಸಿಕೊಂಡಿದೆ. ಮೊದಲ ಟೆಸ್ಟ್ನ್ನು ರೋಚಕವಾಗಿ 2 ವಿಕೆಟ್ನಿಂದ ಗೆದ್ದರೆ, ಎರಡನೇ ಟೆಸ್ಟ್ನ್ನು ಇನ್ನಿಂಗ್ಸ್ ಸಹಿತ 58 ರನ್‌ಗಳ ಜಯ ದಾಖಲಿಸಿದೆ.
ಮೊದಲ ಟೆಸ್ಟ್‌ನಲ್ಲಿ ಲಂಕಾ ಸೋಲಿನಿಂದ ಭಾರತ ಜೂನ್ 7 ರಿಂದ ಓವೆಲ್ನಲ್ಲಿ ಆರಂಭವಾಗಲಿರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದೆ. ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ನೀಡಿದ ಬೃಹತ್ ಗುರಿಯನ್ನು ಶ್ರೀಲಂಕಾ ಎರಡು ಇನ್ನಿಂಗ್ಸ್ಗಳಿಂದ ಸಾಧಿಸಲಾಗದೇ ಇನ್ನಿಂಗ್ಸ್ ಸಹಿತ ಸೋಲನುಭವಿಸಿದೆ.
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 580 ರನ್ ಗಳಿಸಿತ್ತು. ಈ ಇನ್ನಿಂಗ್ಸ್‌ನಲ್ಲಿ ಇಬ್ಬರು ಆಟಗಾರರು ದ್ವಿಶತಕ ಸಿಡಿಸಿದ್ದರು. ಕೇನ್ ವಿಲಿಯಮ್ಸನ್ 215 ರನ್‌ಗಳ ಇನಿಂಗ್ಸ್ ಆಡಿದರು. ಹೆನ್ರಿ ನಿಕೋಲ್ಸ್ 200 ರನ್ ಗಳಿಸಿದ್ದರು. ನ್ಯೂಜಿಲೆಂಡ್‌ನ 580 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಆಗಿತ್ತು. ಫಾಲೋ ಆನ್ ಆಡಲು ಹೊರಬಿದ್ದ ಶ್ರೀಲಂಕಾ ತಂಡಕ್ಕೆ ಎರಡನೇ ಇನ್ನಿಂಗ್ಸ್ ನಲ್ಲೂ ನ್ಯೂಜಿಲೆಂಡ್ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಇಡೀ ಶ್ರೀಲಂಕಾ ತಂಡವನ್ನು 358 ರನ್‌ಗಳಿಗೆ ಇಳಿಸಲಾಯಿತು.