ಕ್ವೀನ್ಸ್ಟೌನ್, ನ್ಯೂಜಿಲ್ಯಾಂಡ್ :ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮಂಗಳವಾರ ನಡೆದ 2ನೇ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ವಿಕೆಟ್ಗಳ ಸೋಲು ಅನುಭವಿಸಿದೆ.
ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 50 ಓವರ್ಗಳಲ್ಲಿ 6 ವಿಕೆಟ್ಗೆ 270 ರನ್ ಗಳಿಸಿತು. ನಾಯಕಿ ಮಿಥಾಲಿ ರಾಜ್ ಔಟಾಗದೆ ಅವರು 66 ರನ್, ವಿಕೆಟ್ ಕೀಪರ್ ರಿಚಾ ಘೋಷ್ ಅವರ 65 ರನ್, ಎಸ್ ಮೇಘನಾ ಅವರು 49 ರನ್, ಯಶಿಕಾ ಭಾಟಿಯಾ 31, ಶೆಫಾಲಿ ವರ್ಮಾ 24 ರನ್ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು.
ಟೀಂ ಇಂಡಿಯಾದ 270 ರನ್ಗಳನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದ ಪರವಾಗಿ ಅಮೆಲಿಯಾ ಕೆರ್ ಅಜೇಯ 119 ರನ್ ಗಳಿಸಿ ತಂಡ ಗೆಲ್ಲಲು ಕಾರಣರಾದರು. ಇದರ ಜೊತೆಗೆ ಮ್ಯಾಡಿ ಗ್ರೀನ್ 52, ಕೆಟೆ ಮಾರ್ಟಿನ್ 20, ಸೋಫಿ ಡಿವೈನ್ 33 ರನ್ ಗಳಿಸಿದರು. ಈ ಮೂಲಕ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿ ನ್ಯೂಜಿಲ್ಯಾಂಡ್ ತಂಡ ಗೆಲುವು ತನ್ನದಾಗಿಸಿಕೊಂಡಿತು.