ಕರ್ನಾಟಕ

karnataka

ETV Bharat / sports

ವನಿತೆಯರ ಟಿ20 ಕ್ರಿಕೆಟ್‌: ನ್ಯೂಜಿಲ್ಯಾಂಡ್ ವಿರುದ್ಧ ಟಿಂ ಇಂಡಿಯಾಗೆ 18 ರನ್​ಗಳ ಸೋಲು - ಟಿ20 ಪಂದ್ಯದಲ್ಲಿ ಭಾರತೀಯ ಮಹಿಳಯರ ತಂಡಕ್ಕೆ ಸೋಲು

ಇಂದು ನಡೆದ ಏಕೈಕ ಟಿ-20 ಪಂದ್ಯದಲ್ಲಿ ಭಾರತೀಯ ವನಿತೆಯರ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ ವಿರುದ್ಧ ಪರಾಭವಗೊಂಡಿತು. ಇನ್ನು, ಫೆಬ್ರವರಿ 12ರಿಂದ 5 ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ.

New Zealand Women vs India Women: India lost Only T20I
ವನಿತೆಯರ ಟಿ20: ನ್ಯೂಜಿಲ್ಯಾಂಡ್ ವಿರುದ್ಧ ಟಿಂ ಇಂಡಿಯಾಗೆ 18 ರನ್​ಗಳ ಸೋಲು

By

Published : Feb 9, 2022, 9:36 AM IST

ಕ್ವೀನ್ಸ್​ಟೌನ್(ನ್ಯೂಜಿಲ್ಯಾಂಡ್​): ಮುಂದಿನ ತಿಂಗಳಿಂದ ಆರಂಭವಾಗಲಿರುವ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ಗೆ ಮುಂಚಿತವಾಗಿ ವಿವಿಧ ದೇಶಗಳ ತಂಡಗಳು ಅಭ್ಯಾಸದಲ್ಲಿ ತೊಡಗಿವೆ. ಇದರ ಭಾಗವಾಗಿ, ನ್ಯೂಜಿಲೆಂಡ್​ ವಿರುದ್ಧದ ಮಹತ್ವದ ಸರಣಿಯಲ್ಲಿ ಭಾರತೀಯ ಮಹಿಳೆಯರ ತಂಡ ಭಾಗಿಯಾಗಿದ್ದು, ಇಂದು ಮೊದಲ ಮತ್ತು ಏಕೈಕ ಟಿ-20 ಪಂದ್ಯದಲ್ಲಿ 18 ರನ್​​ಗಳ ಅಂತರದಲ್ಲಿ ಸೋಲು ಕಂಡಿತು.

ಕ್ವೀನ್ಸ್​ಟೌನ್​ನ​ ಜಾನ್ ಡೇವಿಸ್ ಓವಲ್​ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದು, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತೀಯ ವನಿತೆಯರ ತಂಡಕ್ಕೆ ನ್ಯೂಜಿಲ್ಯಾಂಡ್ 155 ರನ್​ಗಳ ಗುರಿ ನೀಡಿತು. ತಂಡದ ಪರವಾಗಿ ​​ಸುಜಿ ಬೇಟ್ಸ್​​ 36, ಸೋಫಿ ಡಿವೈನ್ 31, ಅಮೇಲಿಯಾ ಕೆರ್ 17, ಮ್ಯಾಡಿ ಗ್ರೀನ್ 26, ಬ್ರೂಕ್ ಹಲ್ಲಿಡೆ 27 ರನ್​ಗಳ ಕೊಡುಗೆ ನೀಡಿದರು.

ಈ ವೇಳೆ, ಭಾರತೀಯ ವನಿತೆಯರು ಕೇವಲ 5 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮ ತಲಾ ಎರಡು ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್​ವಾಡ್ 1 ವಿಕೆಟ್ ಪಡೆದರು.

ನ್ಯೂಜಿಲ್ಯಾಂಡ್ ನೀಡಿದ 155 ರನ್ ಗುರಿ ಬೆನ್ನತ್ತಿದ್ದ ಭಾರತ 8 ವಿಕೆಟ್ ವಿಕೆಟ್ ನಷ್ಟಕ್ಕೆ 137 ರನ್ ಮಾತ್ರ ಗಳಿಸಿತು. ಯಸ್ತಿಕಾ ಭಾಟಿಯಾ 26, ಶಫಾಲಿ ವರ್ಮಾ 13, ಹರ್ಮನ್​ಪ್ರೀತ್ ಕೌರ್ 12, ಎಸ್.ಮೇಘನಾ 37, ರೀಚಾ ಘೋಷ್ 12, ಸ್ನೇಹ್ ರಾಣಾ 6, ಪೂಜಾ ವಸ್ತ್ರಾಕರ್ 10, ಸಿಮ್ರಾನ್ ಬಹದ್ದೂರ್ 10 ರನ್ ಗಳಿಸಿದರು.

ಇದನ್ನೂ ಓದಿ:ರಾಹುಲ್​ ಕಮ್​ಬ್ಯಾಕ್ : ವಿಂಡೀಸ್​ ವಿರುದ್ಧ 2ನೇ ಏಕದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಭಾರತ ಚಿತ್ತ

ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅತ್ಯುತ್ತಮ ಬೌಲಿಂಗ್​ ಮೂಲಕ ಗಮನ ಸೆಳೆಯಿತು. ಜೆಸ್ ಕೆರ್​, ಅಮೇಲಿಯಾ ಕೆರ್​, ಹರ್ಲೆ ಜೆನ್ಸನ್​ ತಲಾ ಎರಡು ವಿಕೆಟ್ ಪಡೆದರೆ, ಸೋಫಿ ಡಿವೈನ್, ತುಹುಹು ತಲಾ ಒಂದು ವಿಕೆಟ್ ಪಡೆದರು.

ಟಿ-20 ನಂತರ 5 ಏಕದಿನ ಪಂದ್ಯಗಳನ್ನು ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ನೊಂದಿಗೆ ಆಡಲಿದೆ. ಮೊದಲ ಏಕದಿನ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ.

ABOUT THE AUTHOR

...view details