ಕ್ವೀನ್ಸ್ಟೌನ್(ನ್ಯೂಜಿಲ್ಯಾಂಡ್):ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವನಿತೆಯರ ತಂಡದ ವಿರುದ್ಧ ಟೀಂ ಇಂಡಿಯಾ ಮೂರು ವಿಕೆಟ್‌ಗಳ ಅಂತರದಿಂದ ಪರಾಭವಗೊಂಡಿದ್ದು, ನ್ಯೂಜಿಲ್ಯಾಂಡ್ ತಂಡ 3-0 ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್ ತಂಡ ಟೀಂ ಇಂಡಿಯಾವನ್ನು ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಎಲ್ಲಾ ವಿಕೆಟ್ಗಳನ್ನು 49.3 ಓವರ್ಗಳಲ್ಲಿ ಕಳೆದುಕೊಂಡ ಟೀಂ ಇಂಡಿಯಾ 279 ರನ್ಗಳನ್ನು ಗಳಿಸಲು ಸಾಧ್ಯವಾಯಿತು.
ಎಸ್.ಮೇಘನಾ 61, ದೀಪ್ತಿ ಶರ್ಮಾ 69, ಶೆಫಾಲಿ ವರ್ಮಾ 51, ನಾಯಕಿ ಮಿಥಾಲಿ ರಾಜ್ 23, ಯಸ್ತಿಕಾ ಭಾಟಿಯಾ 19, ಹರ್ಮನ್ಪ್ರೀತ್ ಕೌರ್ 13, ಸ್ನೇಹ್ ರಾಣಾ 11, ತಾನಿಯಾ ಭಾಟಿಯಾ ಮತ್ತು ಜೂಲನ್ ಗೋಸ್ವಾಮಿ ತಲಾ 8 ಹಾಗು ಏಕ್ತಾ ಬಿಷ್ತ್ 1 ರನ್ ಗಳಿಸಿದರು.
ನ್ಯೂಜಿಲ್ಯಾಂಡ್ ತಂಡದ ಬೌಲಿಂಗ್‌ನಲ್ಲಿ ಸಂಘಟಿತ ಪ್ರಯತ್ನ ಕಂಡುಬಂತು. ಹನ್ನಾಹ್ ರೋವ್ ಮತ್ತು ರೋಸ್ಮೇರಿ ಮೈರ್ ತಲಾ 2 ವಿಕೆಟ್ ಪಡೆದರೆ, ಸೋಫಿ ಡಿವೈನ್, ಅಮೆಲಿಯಾ ಕೆರ್, ಫ್ರಾನ್ಸಿಸ್ ಮ್ಯಾಕೆ, ಆ್ಯಮಿ ಸ್ಯಾಟರ್ಥ್ವೇಟ್ ತಲಾ ಒಂದು ವಿಕೆಟ್ ಪಡೆದರು.