ಸೌತಾಂಪ್ಟನ್ :ಪಾಕಿಸ್ತಾನದ ಯುವ ಬೌಲರ್ ಶಾಹೀನ್ ಆಫ್ರಿದಿ ಇಂಗ್ಲೆಂಡ್ನ ಟಿ20 ಬ್ಲಾಸ್ಟ್ನಲ್ಲಿ 4 ಸತತ ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಹ್ಯಾಂಪ್ಶೈರ್ ತಂಡಕ್ಕೆ ಅಚ್ಚರಿಯ ಗೆಲುವು ತಂದುಕೊಟ್ಟಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಹ್ಯಾಂಪ್ಶೈರ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 141ರನ್ಗಳಿಸಿತ್ತು. 142 ರನ್ಗಳ ಗುರಿ ಬೆನ್ನಟ್ಟಿದ ಮಿಡ್ಲ್ಎಸೆಕ್ಸ್ ಶಾಹೀನ್ ಆಫ್ರಿದಿ (19ಕ್ಕೆ6)ಬೌಲಿಂಗ್ ದಾಳಿಗೆ ತತ್ತರಿಸಿ 121ರನ್ಗಳಿಗೆ ಆಲೌಟ್ ಆಗುವ ಮೂಲಕ 20 ರನ್ಗಳ ಸೋಲನುಭವಿಸಿದೆ.
ಮಿಡ್ಲ್ಎಸೆಕ್ಸ್ಗೆ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 22 ರನ್ಗಳ ಅವಶ್ಯಕತೆಯಿತ್ತು. ಕೈಯಲ್ಲಿ ನಾಲ್ಕು ವಿಕೆಟ್ಗಳಿದ್ದವು. ಅದರಲ್ಲೂ 48 ರನ್ಗಳಿಸಿದ್ದ ಸಿಂಪ್ಸನ್ ಕೂಡ ಕ್ರೀಸ್ನಲ್ಲಿದ್ದರು. ಆದರೆ, 18ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ 2 ರನ್ ಬಿಟ್ಟುಕೊಟ್ಟ ಆಫ್ರಿದಿ ಉಳಿದ ನಾಲ್ಕು ಎಸೆತಗಳಲ್ಲಿ ಮಿಡ್ಲ್ಎಸೆಕ್ಸ್ ತಂಡದ ಎಲ್ಲಾ ನಾಲ್ಕು ವಿಕೆಟ್ ಪಡೆದು ಹ್ಯಾಂಪ್ಶೈರ್ಗೆ 20 ರನ್ಗಳ ಅಚ್ಚರಿಯ ಗೆಲುವು ತಂದುಕೊಟ್ಟರು.