ಮುಂಬೈ :ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಜಯಗಳಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿತು. ಟೈ ಆಗಿದ್ದ ಈ ಪಂದ್ಯದಲ್ಲಿ ಭಾರತ ಐತಿಹಾಸಿಕ ಬೌಲ್‌ಔಟ್ ಮೂಲಕ ಗೆಲುವು ಪಡೆದಿದ್ದು ವಿಶೇಷ.
ಸೆಪ್ಟೆಂಬರ್ 14, 2007ರ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡದ ಮೊದಲು ಬ್ಯಾಟಿಂಗ್ ನಡೆಸಿ 141 ರನ್ಗಳಿಸಿತ್ತು. ಕನ್ನಡಿಗ ರಾಬಿನ್ ಉತ್ತಪ್ಪ 39 ಎಸೆತಗಳಲ್ಲಿ 50 ರನ್ಗಳಿಸಿದ್ರೆ, ಧೋನಿ 33 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಪಾಕ್ ಕೂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 141 ರನ್ಗಳಿಸಿತ್ತು.