ನೇಪಿಯರ್(ನ್ಯೂಜಿಲ್ಯಾಂಡ್): ಇಲ್ಲಿನಮೆಕ್ಲೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರನೇ ಟಿ20 ಪಂದ್ಯವು ಡಿಎಲ್ಎಸ್ ನಿಯಮದ ಪ್ರಕಾರ ಟೈ ಆಗಿದೆ. ಇದರಿಂದ ಟಿ20 ಸರಣಿಯು 1-0 ಅಂತರದಿಂದ ಟೀಂ ಇಂಡಿಯಾದ ಪಾಲಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು.
ಇಂದು ನಡೆದ ಟಿ20 ಸರಣಿಯ ಅಂತಿಮ ಮತ್ತು ಕೊನೆಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿತ್ತು. ಟೀ ಇಂಡಿಯಾದ ಬೌಲರ್ಗಳ ಆರ್ಷದೀಪ್ ಸಿಂಗ್ (4/37) ಮತ್ತು ಮೊಹಮ್ಮದ್ ಸಿರಾಜ್ (4/17) ಮಿಂಚಿನ ದಾಳಿಗೆ 19.4 ಓವರ್ಗಳಲ್ಲಿ ಸರ್ವಪತನ ಕಂಡ ಕಿವೀಸ್ ಆಟಗಾರರು 160 ರನ್ಗಳನ್ನು ಕಲೆ ಹಾಕಿದ್ದರು.
ಈ ಗೆಲುವಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 21 ರನ್ಗಳನ್ನು ಪೇರಿಸುವಷ್ಟರಲ್ಲಿ ಇಶಾನ್ (10 ರನ್), ರಿಷಭ್ ಪಂತ್ (11) ಮತ್ತು ಶ್ರೇಯಸ್ ಐಯ್ಯರ್ ಅವರ ಮೂರು ವಿಕೆಟ್ಗಳನ್ನು ಆರಂಭಿಕ ಆಘಾತವನ್ನು ಅನುಭವಿಸಿತ್ತು. ಅಲ್ಲದೇ, ಸೂರ್ಯ ಕುಮಾರ್ ಯಾದವ್ 13 ರನ್ಗಳಿಗೆ ಪೆವಿಲಿಯನ್ ಸೇರಿಸಿದ್ದರು.