ರಾವಲ್ಪಿಂಡಿ(ಪಾಕಿಸ್ತಾನ):18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತಾ ದೃಷ್ಟಿಯಿಂದ ತಮ್ಮ ಪ್ರವಾಸ ರದ್ದುಪಡಿಸಿದೆ.
ಉಭಯ ತಂಡಗಳ ನಡುವೆ ಇಂದಿನಿಂದ ರಾವಲ್ಪಿಂಡಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಬೇಕಾಗಿತ್ತು. ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷಗಳು ಬಾಕಿ ಇರುವಾಗಲೇ ಕಿವೀಸ್ ಮಹತ್ವದ ನಿರ್ಧಾರ ಕೈಗೊಂಡಿತು.
ಈ ಹಿಂದೆ 2003ರಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಭದ್ರತೆ ದೃಷ್ಟಿಯಿಂದ ಇಲ್ಲಿಗೆ ಬಂದಿರಲಿಲ್ಲ. ಇದೀಗ ಪಾಕ್ ಜೊತೆ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳನ್ನಾಡಲು ಟೀಂ ಆಗಮಿಸಿತ್ತು. ರಾವಲ್ಪಿಂಡಿ ಹಾಗೂ ಲಾಹೋರ್ನಲ್ಲಿ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳು ಆಯೋಜನೆಗೊಂಡಿದ್ದವು.
ಇದನ್ನೂ ಓದಿ:18 ವರ್ಷಗಳ ಬಳಿಕ ಪಾಕ್‌ಗೆ ಬಂದ ನ್ಯೂಜಿಲ್ಯಾಂಡ್ ತಂಡ.. ಏಕದಿನ, ಟಿ-20 ಸರಣಿಯಲ್ಲಿ ಭಾಗಿ..
2009ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಇದಾದ ಬಳಿಕ ಬಹುತೇಕ ತಂಡಗಳು ಪಾಕ್‌ಗೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ. ಇದರ ಹೊರತಾಗಿ ನ್ಯೂಜಿಲ್ಯಾಂಡ್ ತಂಡ ಕಳೆದ ನಾಲ್ಕು ದಿನಗಳ ಹಿಂದೆ ಪಾಕ್‌ಗೆ ಬಂದಿಳಿದಿತ್ತು.
ಕಳೆದ ಎರಡು ವರ್ಷದಿಂದೀಚೆಗೆ ಕೆಲವು ಅಂತಾರಾಷ್ಟ್ರೀಯ ತಂಡಗಳು ಇಲ್ಲಿಗೆ ಪ್ರಯಾಣ ಕೈಗೊಳ್ಳುತ್ತಿವೆ. ನ್ಯೂಜಿಲ್ಯಾಂಡ್ ಕೂಡ ಪಾಕ್ ಪ್ರವಾಸ ಕೈಗೊಂಡಿತ್ತು.
ಪಂದ್ಯ ಆರಂಭಗೊಳ್ಳಲು 20 ನಿಮಿಷ ಬಾಕಿ ಇರುವಾಗ ನಿರ್ಧಾರ