ಜೈಪುರ: ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಮತ್ತು ಮಾರ್ಕ್ ಚಾಪ್ಮನ್ ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 165 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿವೀಸ್ ಮೊದಲ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 164 ರನ್ಗಳಿಸಿದೆ. ಬ್ಯಾಟಿಂಗ್ ಆರಂಭಿಸಿದ ಮೊದಲ ಓವರ್ನಲ್ಲೆ ಕಿವೀಸ್ ವಿಶ್ವಕಪ್ ಸ್ಟಾರ್ ಡೇರಿಲ್ ಮಿಚೆಲ್ ವಿಕೆಟ್ ಕಳೆದುಕೊಂಡರೂ ಗಪ್ಟಿಲ್ ಮತ್ತು ಗಪ್ಟಿಲ್ ಮತ್ತು ಚಾಪ್ಮನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ 109 ರನ್ಗಳ ಜೊತೆಯಾಟ ಜೊತೆಯಾಟದಿಂದ ಕಿವೀಸ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಆರಂಭದಲ್ಲಿ ನಿಧಾನಗತಿ ಆಟವಾಡಿದ ಈ ಜೋಡಿ ಅನುಭವಿ ಅಶ್ವಿನ್ ಓವರ್ ಮುಗಿದ ನಂತರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿತು. ಚಾಪ್ಮನ್ ಅಶ್ವಿನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಟ್ ಆಗುವ ಮುನ್ನ 50 ಎಸೆತಗಳಲ್ಲಿ 63 ರನ್ಗಳಿಸಿದ್ದ ತಂಡವನ್ನು ಆಘಾತದಿಂದ ಪಾರು ಮಾಡಿದ್ದರು. ಆದರೆ ಅದೇ ಓವರ್ನ 5ನೇ ಎಸೆತದಲ್ಲಿ ಗ್ಲೇನ್ ಫಿಲಿಪ್ಸ್ ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಅಶ್ವಿನ್ ಕಿವೀಸ್ಗೆ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು.
ಜೊತೆಗಾರನನ್ನು ಕಳೆದುಕೊಂಡರು ದೃತಿಗೆಡದ ಗಪ್ಟಿಲ್ 3ನೇ ವಿಕೆಟ್ ಕೇವಲ 21ಎಸೆತಗಳಲ್ಲಿ 40 ರನ್ ಸೇರಿಸಿದರು. 42 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 70 ರನ್ಗಳಿಸಿದ್ದ ವೇಳೆ ದೀಪಕ್ ಚಾಹರ್ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಔಟಾದರು.
ಇವರ ನಂತರ ಬಂದ ಸೀಫರ್ಟ್ 12, ರಚಿನ್ ರವೀಂದ್ರ 7 ಮಿಚೆಲ್ ಸ್ಯಾಂಟ್ನರ್ ಅಜೇಯ 4 ರನ್ಗಳಿಸಿದರು. ಭಾರತದ ಪರ ರವಿಚಂದ್ರನ್ ಅಶ್ವಿನ್ 23ಕ್ಕೆ 2, ಭುವನೇಶ್ವರ್ ಕುಮಾರ್ 24ಕ್ಕೆ2 ಮತ್ತು ದೀಪಕ್ ಚಾಹರ್ 42ಕ್ಕೆ 1 ವಿಕೆಟ್ ಪಡೆದರು.