ಕರ್ನಾಟಕ

karnataka

ETV Bharat / sports

ಎಚ್ಚರಿಕೆಯ ಆರಂಭ ಪಡೆದ ಕಿವೀಸ್​ ಪಡೆ; 3ನೇ ದಿನದಂತ್ಯಕ್ಕೆ 101ಕ್ಕೆ 2 ವಿಕೆಟ್​ ಪತನ - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​

ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಬಳಿಕ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಎಚ್ಚರಿಕೆಯ ಆರಂಭ ಪಡೆಯಿತು.

New Zealand lose their openers in the final session
ಎಚ್ಚರಿಕೆಯ ಆರಂಭ ಪಡೆದ ಕಿವೀಸ್​ ಪಡೆ

By

Published : Jun 21, 2021, 7:26 AM IST

ಸೌತಾಂಪ್ಟನ್: ಕೈಲ್ ಜೇಮಿಸನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್(WTC) ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 217 ರನ್​ಗಳಿಗೆ ಆಲೌಟ್ ಆಗಿದೆ.

146 ರನ್​ಗಳೊಂದಿಗೆ 3ನೇ ದಿನದ ಇನ್ನಿಂಗ್ಸ್​ ಆರಂಭಿಸಿದ ಭಾರತಕ್ಕೆ ಕೈಲ್‌ ಜೇಮಿಸನ್ ದಿನದ 3ನೇ ಓವರ್​ನಲ್ಲಿ 44 ರನ್​ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ನಂತರ ಬಂದ ಬ್ಯಾಟ್ಸ್​ಮನ್​ಗಳು ಕಿವೀಸ್ ಬೌಲರ್​ಗಳು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ಕೊಹ್ಲಿ ನಂತರ ಬಂದ ರಿಷಭ್ ಪಂತ್ 19 ಎಸೆತಗಳಲ್ಲಿ 4 ರನ್​ಗಳಿಸಿ ಜೇಮಿಸನ್​ಗೆ 3ನೇ ಬಲಿಯಾದರು. 117 ಎಸೆಗಳಲ್ಲಿ 49 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ಉಪನಾಯಕ ಅಜಿಂಕ್ಯ ರಹಾನೆ, ನೀಲ್ ವ್ಯಾಗ್ನರ್​ ಬೌಲಿಂಗ್​ನಲ್ಲಿ ಲ್ಯಾಥಮ್​ಗೆ ಕ್ಯಾಚ್​ ನೀಡಿ ಔಟಾದರು.

ನಂತರ ಬಂದ ಅಶ್ವಿನ್ (22) ಜಡೇಜಾ ಜೊತೆಗೂಡಿ 23 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅವರು 22 ರನ್​ಗಳಿಸಿದ್ದ ವೇಳೆ ಅನುಭವಿ ಟಿಮ್ ಸೌಥಿಗೆ ವಿಕೆಟ್​ ಒಪ್ಪಿಸಿದರು. ಭೋಜನ ವಿರಾಮಕ್ಕೆ ಮುನ್ನ 211ಕ್ಕೆ 7 ಭಾರತ ತಂಡ, ನಂತರ ಕೇವಲ 6 ರನ್‌ ಗಳಿಸುವಷ್ಟರಲ್ಲಿ​ ಕೊನೇಯ 3 ವಿಕೆಟ್​ ಕಳೆದುಕೊಳ್ಳುವ ಮೂಲಕ ಕೇವಲ 217 ರನ್​ಗೆ ಆಲೌಟ್​​ ಆಯಿತು.

ನ್ಯೂಜಿಲ್ಯಾಂಡ್ ಪರ ಕೈಲ್ ಜೆಮೀಸನ್ 31ಕ್ಕೆ 5 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ವ್ಯಾಗ್ನರ್ ಮತ್ತು ಬೌಲ್ಟ್​ ತಲಾ 2 ವಿಕೆಟ್​ ಹಾಗೂ ಸೌಥಿ ಒಂದು ವಿಕೆಟ್ ಪಡೆದರು.

ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಬಳಿಕ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಎಚ್ಚರಿಕೆಯ ಆರಂಭ ಪಡೆಯಿತು. ಟಾಮ್ ಲಾಥಮ್ ಮತ್ತು ಡೆವೊನ್ ಕಾನ್‌ವೇ ಜೋಡಿ ಮೊದಲ ವಿಕೆಟ್​​ಗೆ 70ರನ್​ಗಳ ಕಾಣಿಕೆ ನೀಡಿತು. ಟಾಮ್ ಲಾಥಮ್ 30 ರನ್​​ಗಳಿಸಿದಾಗ ಅಶ್ವಿನ್​ ಬೌಲಿಂಗ್​ನಲ್ಲಿ ವಿರಾಟ್​​ ಕೊಹ್ಲಿ ಗೆ ಕ್ಯಾಚ್​ ನೀಡಿ ಪೆವಲಿಯನ್​ ಸೇರಿದರು.

ನಂತರ ಕಾನ್‌ವೇ ಜೊತೆಗೂಡಿದ ನಾಯಕ ವಿಲಿಯಮ್ಸನ್ ಕೂಡ ಎಚ್ಚರಿಕೆಯ ಆಟದ ಮೊರೆ ಹೋದರು. ಈ ಜೋಡಿ ಎರಡನೇ ವಿಕೆಟ್​ಗೆ 31 ರನ್ ಕಲೆಹಾಕಿತು. ಕಾನ್‌ವೇ 54 ರನ್​ ಗಳಿಸಿದಾಗ ಇಶಾಂತ್ ಶರ್ಮಾ ಅವರ ವಿಕೆಟ್ ಕಬಳಿಸಿದರು. ಈ ಮೂಲಕ 3ನೇ ದಿನದ ಅಂತ್ಯದ ವೇಳೆಗೆ ನ್ಯೂಜಿಲ್ಯಾಂಡ್​ ತಂಡ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 101 ರನ್​ಗಳಿಸಿದೆ. ವಿಲಿಯಮ್ಸನ್ 12* ರನ್, ಟೇಲರ್​ 0*, ರನ್​ಗಳಿಸಿ ಕ್ರೀಸ್​​ ಕಾಯ್ದುಕೊಂಡಿದ್ದಾರೆ.

ಸ್ಕೋರ್‌ ವಿವರ:

ಭಾರತ: 92.1 ಓವರ್‌ಗಳಲ್ಲಿ 217 (ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ಆರ್.ಅಶ್ವಿನ್ 22, ಕೈಲ್ ಜೇಮಿಸನ್ 31ಕ್ಕೆ 5, ಟ್ರೆಂಟ್ ಬೌಲ್ಟ್ 47ಕ್ಕೆ 2, ನೀಲ್ ವಾಗ್ನರ್ 40ಕ್ಕೆ 2)

ನ್ಯೂಜಿಲೆಂಡ್: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 101 (ಟಾಮ್ ಲಾಥಮ್ 30, ಡೆವೊನ್ ಕಾನ್‌ವೇ 54, ಇಶಾಂತ್ ಶರ್ಮ 19ಕ್ಕೆ 1, ಆರ್.ಅಶ್ವಿನ್ 20ಕ್ಕೆ 1).

ABOUT THE AUTHOR

...view details