ಡುನೇಡಿನ್: ಮಳೆಯಿಂದ 27 ಓವರ್ಗಳಿಗೆ ಮೀಸಲಾಗಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಆತಿಥೇಯ ನ್ಯೂಜಿಲ್ಯಾಂಡ್ 9 ವಿಕೆಟ್ಗಳ ಜಯ ಸಾಧಿಸಿತು.
2022ರ ಮಹಿಳಾ ಏಕದಿನ ವಿಶ್ವಕಪ್ನ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ತಂಡ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಆಹ್ವಾನಿಸಿತ್ತು. ನಿಗರ್ ಸುಲ್ತಾನ ನೇತೃತ್ವದ ಬಾಂಗ್ಲಾ ಮೊದಲ ವಿಕೆಟ್ಗೆ 59 ರನ್ಗಳ ಜೊತೆಯಾಟದ ಹೊರತಾಗಿಯೂ ದಿಢೀರ್ ಕುಸಿತ ಕಂಡು 27 ಓವರ್ಗಳಲ್ಲಿ ಕೇವಲ 140 ರನ್ಗಳಿಸಿತು.
ಆರಂಭಿಕರಾದ ಫರ್ಗಾನ ಹಕ್ 52 ರನ್ ಮತ್ತು ಶಮಿಮಾ ಸುಲ್ತಾನ 33 ರನ್ಗಳಿಸಿದರು. ಇವರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟರ್ಗಳು ಕಿವೀಸ್ ದಾಳಿಯ ಮುಂದೆ ನಿಲ್ಲಲಾರದೆ ಹೋದರು. ನಾಯಕಿ ನಿಗರ್ 11, ಸೊಭಾನಾ ಮೋಸ್ತರಿ 13 ಎರಡಂಕಿ ಮೊತ್ತ ದಾಟಿದ ಮತ್ತಿಬ್ಬರು ಬ್ಯಾಟರ್ಗಳಾಗಿದ್ದಾರೆ.