ಢಾಕಾ: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಟಿ20 ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಬಾಂಗ್ಲಾದೇಶ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲ್ಯಾಂಡ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲ್ಯಾಂಡ್ ಆರಂಭದಿಂದಲೇ ಬಾಂಗ್ಲಾದೇಶ ಬೌಲರ್ಗಳ ದಾಳಿಗೆ ತರಗೆಲೆಯಂತೆ ಉದುರಿಹೋದರು. ಕೇವಲ 16.5 ಓವರ್ಗಳಲ್ಲಿ 60 ರನ್ಗಳಿಗೆ ಕಿವೀಸ್ ಸರ್ವಪತನಗೊಂಡಿತು. ನಾಯಕ ಟಾಪ್ ಲಾಥಮ್ ಮತ್ತು ಹೆನ್ರಿ ನಿಕೋಲ್ಸ್ ಮಾತ್ರ ತಲಾ 18 ರನ್ಗಳಿಸಿ ತಂಡದಲ್ಲಿ ಎರಡಂಕಿ ಮೊತ್ತ ದಾಟಿದ ಬ್ಯಾಟ್ಸ್ಮನ್ಗಳಾದರು.
ಆಸ್ಟ್ರೇಲಿಯಾ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ತಂಡ ಇದೀಗ ನ್ಯೂಜಿಲ್ಯಾಂಡ್ ವಿರುದ್ಧವೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಬುಧವಾರ ಆರಂಭವಾದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಕೇವಲ 60 ರನ್ಗಳಿಗೆ ಆಲೌಟ್ ಮಾಡಿದೆ. ಇದು ನ್ಯೂಜಿಲ್ಯಾಂಡ್ ಟಿ20 ಚರಿತ್ರೆಯಲ್ಲೇ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಆರಂಭಿಕ ಬ್ಯಾಟ್ಸ್ಮನ್ ಟಾಮ್ ಬ್ಲಂಡೆಲ್(2), ರಚಿನ್ ರವೀಂದ್ರ (0), ವಿಲ್ ಯಂಗ್(5), ಕಾಲಿನ್ ಡಿ ಗ್ರ್ಯಾಂಡ್ಹೋಮ್(1), ಕೋಲ್ ಮೆಕಾಂಚಿ(0) ಡಾಗ್ ಬ್ರೇಸ್ವೆಲ್(5) ,ಅಜಾಜ್ ಪಟೇಲ್(3), ಜಾಕೋಬ್ ಡಫ್ಫಿ(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.