ಸೌತಾಂಪ್ಟನ್ :ಕೈಲ್ ಜೆಮಿಸನ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 217 ರನ್ಗಳಿಗೆ ಆಲೌಟ್ ಆಗಿದೆ. 2ನೇ ದಿನ 146ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಇಂದು 71 ರನ್ ಸೇರಿಸಲಷ್ಟೇ ಶಕ್ತವಾಯಿತು.
146 ರನ್ಗಳೊಂದಿಗೆ 3ನೇ ದಿನ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಕೈಲ್ ಜೆಮೀಸನ್ ಕೇವಲ ದಿನದ 3ನೇ ಓವರ್ನಲ್ಲಿ 44 ರನ್ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ನಂತರ ಬಂದ ಬ್ಯಾಟ್ಸ್ಮನ್ಗಳನ್ನು ಕೂಡ ಕಿವೀಸ್ ಬೌಲರ್ಗಳು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಕೊಹ್ಲಿ ನಂತರ ಬಂದ ರಿಷಭ್ ಪಂತ್ 19 ಎಸೆತಗಳಲ್ಲಿ 4 ರನ್ಗಳಿಸಿ ಜೆಮೀಸನ್ಗೆ 3ನೇ ಬಲಿಯಾದರು. 117 ಎಸೆಗಳಲ್ಲಿ 49 ರನ್ಗಳಿಸಿದ್ದ ಉತ್ತಮವಾಗಿ ಆಡುತ್ತಿದ್ದ ಉಪನಾಯಕ ಅಜಿಂಕ್ಯ ರಹಾನೆ ನೀಲ್ ವ್ಯಾಗ್ನರ್ ಬೌಲಿಂಗ್ನಲ್ಲಿ ಲ್ಯಾಥಮ್ಗೆ ಕ್ಯಾಚ್ ನೀಡಿ ಔಟಾದರು.