ಕರ್ನಾಟಕ

karnataka

ETV Bharat / sports

ಅಶ್ವಿನ್, ಸಿರಾಜ್ ಮಾರಕ ದಾಳಿ: ಕಿವೀಸ್ 62ಕ್ಕೆ ಆಲೌಟ್, ಕೊಹ್ಲಿ ಪಡೆಗೆ 263 ರನ್​ಗಳ ಬೃಹತ್ ಮುನ್ನಡೆ​ - ಮಯಾಂಕ್ ಅಗರ್ವಾಲ್ ಶತಕ

ಭಾರತ ತಂಡದ ಮಯಾಂಕ್ ಅಗರ್ವಾಲ್​(150) ಶತಕ ಮತ್ತು ಅಕ್ಷರ್ ಪಟೇಲ್ 52 ಹಾಗೂ ಶುಬ್ಮನ್​ ಗಿಲ್​ 44 ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 325 ರನ್​ಗಳಿಸಿತ್ತು. ನ್ಯೂಜಿಲ್ಯಾಂಡ್ ತಂಡದ ಸ್ಪಿನ್ನರ್​ ಅಜಾಜ್ ಪಟೇಲ್ 119 ರನ್​ ನೀಡಿ 10 ವಿಕೆಟ್​ ಪಡೆದಿದ್ದರು.

New Zealand all out for 62 in reply to India's 325
ನ್ಯೂಜಿಲ್ಯಾಂಡ್​ 62ಕ್ಕೆ ಆಲೌಟ್​

By

Published : Dec 4, 2021, 4:04 PM IST

ಮುಂಬೈ: ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲ್ಯಾಂಡ್ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 62 ರನ್​ಗಳಿಗೆ ಆಲೌಟ್ ಮಾಡಿ 263 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಭಾರತ ತಂಡದ ಮಯಾಂಕ್ ಅಗರ್ವಾಲ್​(150) ಶತಕ ಮತ್ತು ಅಕ್ಷರ್ ಪಟೇಲ್ 52 ಹಾಗೂ ಶುಬ್ಮನ್​ ಗಿಲ್​ 44 ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 325 ರನ್​ಗಳಿಸಿತ್ತು. ನ್ಯೂಜಿಲ್ಯಾಂಡ್ ತಂಡದ ಸ್ಪಿನ್ನರ್​ ಅಜಾಜ್ ಪಟೇಲ್ 119 ರನ್​ ನೀಡಿ 10 ವಿಕೆಟ್​ ಪಡೆದಿದ್ದರು.

ನ್ಯೂಜಿಲ್ಯಾಂಡ್​ 62ಕ್ಕೆ ಆಲೌಟ್

325 ರನ್​ಗಳನ್ನು ಹಿಂಬಾಲಿಸಿದ ನ್ಯೂಜಿಲ್ಯಾಂಡ್​ ಭಾರತೀಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 62 ರನ್​ಗಳಿಗೆ ಸರ್ವಪತನಗೊಂಡಿತು. ಇದು ಭಾರತದಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮೊತ್ತವಾಯಿತು. ಕೈಲ್ ಜೇಮಿಸನ್​(17) ಮತ್ತು ಟಾಮ್​ ಲೇಥಮ್​(10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್​ 19ಕ್ಕೆ3, ಅಕ್ಷರ್ ಪಟೇಲ್ 14ಕ್ಕೆ 2, ರವಿಚಂದ್ರನ್ ಅಶ್ವಿನ್ 8ಕ್ಕೆ 4 ಮತ್ತು ಜಯಂತ್ ಯಾದವ್​ 13ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಇದನ್ನು ಓದಿ:ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದು ಅಜಾಜ್‌ ಪಟೇಲ್‌ ದಾಖಲೆ

ABOUT THE AUTHOR

...view details