ಮುಂಬೈ: ಐಪಿಎಲ್ ಎಂದರೆ ಕೇವಲ ಕ್ರಿಕೆಟ್ ಮಾತ್ರ ಇರುವುದಿಲ್ಲ, ಮೋಜು ಮಸ್ತಿ ಜೊತೆಗೆ ಮನರಂಜನೆ ಕೂಡ ಅಗಾಧವಾಗಿರುತ್ತದೆ. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಸುಂದರ ಹುಡುಗಿಯೊಬ್ಬಳು ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಐಪಿಎಲ್ ಕ್ಯಾಮರಾಮನ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿರುವ ಅಭಿಮಾನಿಗಳತ್ತ ಆವಾಗವಾಗ ಕಣ್ಣಾಯಿಸುತ್ತಿರುತ್ತಾರೆ. ಕಳೆದ ವರ್ಷ ಆರ್ಸಿಬಿ ಮಿಸ್ಟರಿ ಗರ್ಲ್, ಅದಕ್ಕೂ ಹಿಂದೆ ಮುಂಬೈ ಇಂಡಿಯನ್ಸ್ಪರ ಪ್ರಾರ್ಥನೆ ಮಾಡುವ ಅಜ್ಜಿ ಕ್ಯಾಮೆರಾಮೆನ್ ಕಣ್ಣಿಗೆ ಬಿದ್ದು ಪ್ರಸಿದ್ಧರಾಗಿದ್ದರು.
ಇದೀಗ ಭಾನುವಾರ ಸಂಜೆ ನಡೆದ ಪಂದ್ಯದ ವೇಳೆ ಕುಲ್ದೀಪ್ ಯಾದವ್ ಕೆಕೆಆರ್ ತಂಡದ ಉಮೇಶ್ ಯಾದವ್ ಅವರನ್ನು ವಿಕೆಟ್ ಪಡೆದಾಗ ಈ ನಿಗೂಢ ಹುಡುಗಿಯ ಚಹರೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಳಿಯ ಟಾಪ್ ತೊಟ್ಟಿರುವ ಈ ಹುಡುಗಿ ಯಾರೆಂದು ಆರಂಭದಲ್ಲಿ ಗೊತ್ತಿರಲಿಲ್ಲವಾದರೂ, ವೃತ್ತಿಯಲ್ಲಿ ನಟಿ ಆರತಿ ಬೇಡಿ ಎಂದು ನಂತರ ತಿಳಿದುಬಂದಿದೆ.