ನವದೆಹಲಿ :ಭಾರತೀಯ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ ನಂತರ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಜಾಗಕ್ಕೆ ವಿದೇಶಿ ಕ್ರಿಕೆಟಿಗನನ್ನು ಆಯ್ಕೆ ಮಾಡಲು ಮುಂದಾಗಿದೆ. ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡುವ ಯೋಜನೆಗೆ ಮಂಡಳಿಯ ಬಹುಪಾಲು ಸದಸ್ಯರು ಆಸಕ್ತಿ ತೋರಿಲ್ಲ ಎಂದು ತಿಳಿದು ಬಂದಿದೆ.
ಅನಿಲ್ ಕುಂಬ್ಳೆ ಅವರು ಭಾರತದ ಕೋಚ್ ಆಗುವುದಕ್ಕೆ ಬಯಸುತ್ತಿಲ್ಲವೋ ಅಥವಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಹೊರೆತಪಡಿಸಿ, ಮಂಡಳಿಯ ಉಳಿದ ಸದಸ್ಯರು ಕುಂಬ್ಳೆಯನ್ನು ಕೋಚ್ ಆಗಿ ತರುವ ಯೋಜನೆ ಇಷ್ಟಪಡುತ್ತಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ, ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಮಂಡಳಿ ವಿದೇಶಿ ಕೋಚ್ ಅನ್ನು ನೇಮಕ ಮಾಡಲು ಎದುರು ನೋಡುತ್ತಿದೆ ಎಂದು ತಿಳಿದು ಬಂದಿದೆ.
ಕುಂಬ್ಳೆ ಕೋಚ್ ಹುದ್ದೆಗೇರಲು ತಿರಸ್ಕರಿಸಿರಬಹುದಾ?
ಅನಿಲ್ ಕುಂಬ್ಳೆ ಪ್ರಸ್ತುತ ಬಿಸಿಸಿಐ ಆಫರ್ ತಿರಸ್ಕರಿಸಿರಬಹುದೂ ಎಂಬ ಮಾತಿದೆ. ಯಾಕೆಂದರೆ, ಈ ಹಿಂದೆಯೇ 2016ರಲ್ಲಿ ಒಂದು ವರ್ಷಗಳ ಕಾಲ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಆದರೆ, ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಹಿರಿಯ ಕ್ರಿಕೆಟಿಗರೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದಂತೆ ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಾಲ್ಕು ವರ್ಷಗಳ ಹಿಂದೆ ಕುಂಬ್ಳೆ ಕೋಚಿಂಗ್ ಪದ್ಧತಿಯನ್ನು ಪ್ರಶ್ನಿಸಿದ್ದ ಬಹುಪಾಲು ಕ್ರಿಕೆಟಿಗರು, ಈಗಲೂ ತಂಡದಲ್ಲೇ ಇದ್ದಾರೆ. ಹಾಗಾಗಿ, ಹೊಸತನವೇನು ಇಲ್ಲದಿದ್ದಾಗ ಮತ್ತೆ ಕೋಚ್ ಆಗುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಕುಂಬ್ಳೆ ಅಭಿಪ್ರಾಯವಿರಬಹುದು. ಇನ್ನು, ಕುಂಬ್ಳೆಯನ್ನು ಮತ್ತೆ ಕೋಚ್ ಆಗಿ ನೇಮಕ ಮಾಡುವುದಕ್ಕೆ ಸೌರವ್ ಗಂಗೂಲಿ ಬಿಟ್ಟರೆ ಬೇರೆ ಸದಸ್ಯರಿಂದ ಒಮ್ಮತದ ಅಭಿಪ್ರಾಯವಿಲ್ಲ ಎಂದು ಬಿಸಿಸಿಐ ಉನ್ನತ ಮೂಲ IANSಗೆ ಮಾಹಿತಿ ನೀಡಿದೆ.
ಭಾರತದ ಮತ್ತೊಬ್ಬ ದಿಗ್ಗಜ ವಿವಿಎಸ್ ಲಕ್ಷ್ಮಣ್ ಹೆಸರೂ ಕೂಡ ಕೇಳಿ ಬಂದಿತ್ತಾದರೂ ಬಿಸಿಸಿಐ ಮೂಲಗಳ ಪ್ರಕಾರ ಅವರಿಗೂ ಈ ಹುದ್ದೆ ಸಿಗುವ ಸಾಧ್ಯತೆಯಿಲ್ಲ. ಅಲ್ಲದೆ ಕುಂಬ್ಳೆ ಕೋಚ್ ಆಗಿ ಅವರ ದಾಖಲೆ ಕೂಡ ಹೇಳಿಕೊಳ್ಳುವಂತಿಲ್ಲ. ಇನ್ನೂ ಒಂದು ತಿಂಗಳು ಸಮಯವಿದ್ದು, ಬಹುತೇಕ ಮಂಡಳಿ ವಿದೇಶಿ ಕೋಚ್ ನೇಮಕ ಮಾಡುವ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗುತ್ತಿದೆ.
ಇದನ್ನು ಓದಿ:ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ.. SRH ಜತೆಗಿನ ಸಂಬಂಧ ಕಡಿದುಕೊಂಡ್ರಾ ವಾರ್ನರ್!?