ಚೆನ್ನೈ:ಕೇನ್ ವಿಲಿಯಮ್ಸನ್ ಸ್ಪಿನ್ ಬೌಲರ್ಗಳ ಎದುರು ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯದಿಂದಲೇ ಅವರು ತಂಡದ ಅವಿಭ್ಯಾಜ್ಯ ಅಂಗವಾಗಿದ್ದಾರೆ ಎಂದು ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ಪಂದ್ಯಗಳಿಂದ ಕೇನ್ ವಿಲಿಯಮ್ಸನ್ ಗಾಯದ ಕಾರಣ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್ ಆಗಿದ್ದು ಪಂಜಾಬ್ ವಿರುದ್ಧ ತಂಡಕ್ಕೆ ಮರಳಿದ್ದಾರೆ.
ವಿಲಿಯಮ್ಸನ್ ಅವರನ್ನು ತಂಡದಲ್ಲಿ ಆ್ಯಂಕರ್ ಪಾತ್ರವನ್ನು ನಿರ್ವಹಿಸುವುದು ನಮ್ಮ ಯೋಜನೆಯಾಗಿದೆ. ಅವರು ಸ್ಪಿನ್ನರ್ಗಳ ಉತ್ತಮವಾಗಿ ಸ್ಟ್ರೈಕ್ ಬದಲಾಯಿಸುತ್ತಾರೆ. ತಂಡದ ಗೇಮ್ ಪ್ಲಾನ್ ಮತ್ತು ಅದರಲ್ಲಿ ಅವರ ಪಾತ್ರ ಏನೆಂಬುದು ಅವರಿಗೆ ಗೊತ್ತಿದೆ. ಅವರನ್ನು ಹೊಂದಿರುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಬಲ ಬಂದಿದೆ " ಎಂದು ವಾರ್ನರ್ ಪಂಜಾಬ್ ವಿರುದ್ದ ಗೆದ್ದ ನಂತರ ತಿಳಿಸಿದ್ದಾರೆ.
ಪಂಜಾಬ್ ತಂಡವನ್ನು ಕೇವಲ 120 ರನ್ಗಳಿಗೆ ಕಟ್ಟಿಹಾಕಿದ ಹೈದರಾಬಾದ್ ತಂಡ 18.4 ಓವರ್ಗಳಲ್ಲಿ ಗುರಿ ತಲುಪಿ 9 ವಿಕೆಟ್ಗಳ ಜಯ ಸಾಧಿಸಿತು.
ಇದನ್ನು ಓದಿ:ಬೌಲರ್ಸ್, ಬೈರ್ಸ್ಟೋವ್ ಮಿಂಚು: ಪಂಜಾಬ್ ಮಣಿಸಿ 14ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದ ಸನ್ರೈಸರ್ಸ್