ಕರ್ನಾಟಕ

karnataka

ETV Bharat / sports

ಉಮ್ರಾನ್ ಮಲಿಕ್ ಪ್ರಗತಿಯನ್ನು ಗಮನಿಸಬೇಕಾದ ಅಗತ್ಯವಿದೆ: ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 21 ವರ್ಷದ ಜಮ್ಮು ಮತ್ತು ಕಾಶ್ಮೀರದ ಯುವಕ 152.95 Kmh ನಲ್ಲಿ ಬೌಲಿಂಗ್ ಮಾಡಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದರು. ಸ್ತತಃ ಕೊಹ್ಲಿ ಕೂಡ ಹೈದರಾಬಾದ್​ ಫ್ರಾಂಚೈಸಿ ಯುವಕ ಬೌಲಿಂಗ್​ ನೀಡಿ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದರು.

umran malik
ಉಮ್ರಾನ್ ಮಲಿಕ್

By

Published : Oct 7, 2021, 4:30 PM IST

Updated : Oct 7, 2021, 7:08 PM IST

ಅಬುಧಾಬಿ: ಐಪಿಎಲ್​ನಲ್ಲಿ ತನ್ನ ವೇಗದ ಬೌಲಿಂಗ್​ನಿಂದ ಕ್ರಿಕೆಟ್​ ಪ್ರಿಯರನ್ನು ಬೆರಗುಗೊಳಿಸಿರುವ ಸನ್​ರೈಸರ್ಸ್​ ಹೈದರಾಬಾದ್​ ವೇಗಿ ಉಮ್ರಾನ್​ ಮಲಿಕ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್​ಸಿಬಿ ಮತ್ತು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಜಮ್ಮು- ಕಾಶ್ಮೀರದ ಯುವಕನ ಸಾಮರ್ಥ್ಯವನ್ನು ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 21 ವರ್ಷದ ಜಮ್ಮು ಮತ್ತು ಕಾಶ್ಮೀರದ ಯುವಕ 152.95 Kmh ನಲ್ಲಿ ಬೌಲಿಂಗ್ ಮಾಡಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದರು. ಸ್ತತಃ ಕೊಹ್ಲಿ ಕೂಡ ಹೈದರಾಬಾದ್​ ಫ್ರಾಂಚೈಸಿ ಯುವಕ ಬೌಲಿಂಗ್​ ನೀಡಿ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದರು.

ಈ ಟೂರ್ನಮೆಂಟ್​ ಪ್ರತಿ ವರ್ಷ ಯುವ ಆಟಗಾರರನ್ನು ಹೊರ ತರುತ್ತಿದೆ. 150ರಲ್ಲಿ ಬೌಲಿಂಗ್ ಮಾಡಬಲ್ಲ ಯುವಕನನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಇಲ್ಲಿಂದಲೇ ಆತನ ಪ್ರಗತಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೈದರಾಬಾದ್​ ವಿರುದ್ಧ 4 ರನ್​ಗಳ ಸೋಲು ಕಂಡ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ತಿಳಿಸಿದ್ದಾರೆ.

ವೇಗದ ಬೌಲರ್‌ಗಳ ಬೆಳವಣಿಗೆ ಭಾರತೀಯ ಕ್ರಿಕೆಟ್‌ಗೆ ಒಳ್ಳೆಯ ಸಂಕೇತವಾಗಿದೆ. ಎಲ್ಲರೂ ಈ ರೀತಿಯ ಪ್ರತಿಭೆ ನೋಡಿದಾಗಲೆಲ್ಲ ಅವರ ಮೇಲೆ ದೃಷ್ಟಿ ಹಾಯಿಸುತ್ತಿರುತ್ತಾರೆ ಮತ್ತು ಐಪಿಎಲ್​ ಹಂತದಲ್ಲಿ ಅವರ ಪ್ರದರ್ಶನವನ್ನು ಗರಿಷ್ಠಮಟ್ಟದಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಆರ್​ಸಿಬಿ ನಾಯಕ ತಿಳಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ 141 ರನ್​ಗಳಿಸಿದರೆ, ಇದಕ್ಕುತ್ತರವಾಗಿ ಆರ್​ಸಿಬಿ 137 ರನ್​ಗಳಿಸಿ 4 ರನ್​ಗಳಿಂದ ಸೋಲು ಕಂಡಿತು.

ಇದನ್ನೂ ಓದಿ:ಭಾರತದ ಟಿ-20 ವಿಶ್ವಕಪ್ ತಂಡದಲ್ಲಿ ಒಬ್ಬ ವೇಗಿಯ ಕೊರತೆಯಿದೆ: ಎಂಎಸ್​ಕೆ ಪ್ರಸಾದ್​

Last Updated : Oct 7, 2021, 7:08 PM IST

ABOUT THE AUTHOR

...view details