ಕೋಲ್ಕತ್ತಾ: ಭಾರತ ತಂಡದ ಭಾನುವಾರ ನಡೆದ ಕಿವೀಸ್ ವಿರುದ್ಧ(India won series against Kiwis) ಕೊನೆಯ ಪಂದ್ಯ ಗೆಲ್ಲುವ ಮೂಲಕ 3-0ಯಲ್ಲಿ ಟಿ20 ಸರಣಿ ವಶಪಡಿಸಿಕೊಂಡಿರುವುದಕ್ಕೆ ಕೋಚ್ ರಾಹುಲ್ ದ್ರಾವಿಡ್(head coach Rahul Dravid ) ಆಟಗಾರರ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಕಠಿಣ ಪರಿಸ್ಥಿತಿಯಲ್ಲಿ ಕಿವೀಸ್ ಈ ಸರಣಿಯನ್ನಾಡಿರುವುದನ್ನ ಅರಿವ ನಮ್ಮ ಕಾಲನ್ನು ನೆಲದ ಮೇಲೆ ಇರುವಂತೆ ನೋಡಿಕೊಳ್ಳಿ ಎಂದು ತಂಡಕ್ಕೆ ಸೂಚಿಸಿದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಆಗಿ ಮತ್ತು ರೋಹಿತ್ ನಾಯಕನಾಗಿ(captain Rohit sharma) ತಮ್ಮ ಮೊದಲ ಸರಣಿ ಗೆದ್ದಿರುವುದು ಇಬ್ಬರಿಗೂ ಉತ್ತಮ ಆರಂಭವಾಗಿದೆ. ಆದರೆ ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್(T20 world cup) ಫೈನಲ್ ಮುಗಿದ ಎರಡೇ ದಿನದ ಅಂತರದಲ್ಲಿ ಈ ಸರಣಿಯಲ್ಲಿ ಪಾಲ್ಗೊಂಡಿದೆ. ಜೊತೆಗೆ 6 ದಿನದ ಅಂತರದಲ್ಲಿ 3 ಪಂದ್ಯಗಳನ್ನಾಡಿರುವುದಕ್ಕೆ ದ್ರಾವಿಡ್ ಆಟಗಾರರಿಗೆ ಹೆಚ್ಚು ಸಂಭ್ರಮಿಸದಿರಲು ಹೇಳಿದ್ದಾರೆ.
" ಇದೊಂದು ಒಳ್ಳೆಯ ಸರಣಿ ಜಯ. ಪ್ರತಿಯೊಬ್ಬ ಆಟಗಾರರು ಸರಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ಉತ್ತಮ ಆರಂಭ ಪಡೆದುಕೊಂಡಿದ್ದೇವೆ. ನಾವು ವಾಸ್ತವದ ಬಗ್ಗೆಯೂ ಅರಿತುಕೊಳ್ಳಬೇಕು ಮತ್ತು ನಮ್ಮ ಪಾದವನ್ನು ನೆಲದ ಮೇಲೇ ಇಟ್ಟುಕೊಳ್ಳಬೇಕು. ಏಕೆಂದರೆ ಟಿ20 ವಿಶ್ವಕಪ್ ಮುಗಿದು ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತು ಕೇವಲ 6 ದಿನಗಳಲ್ಲಿ ಮೂರು ಸರಣಿ ಆಡುವುದು ಸುಲಭವಲ್ಲ" ಎಂದು ಸರಣಿ ಮುಗಿದ ಬಳಿಕ ದ್ರಾವಿಡ್ ಹೇಳಿದ್ದಾರೆ.