ಕಾಬೂಲ್(ಅಫ್ಘಾನಿಸ್ತಾನ): ಭಾರತದಲ್ಲಿ ನಡೆಯುವ ವಿಶ್ವಕಪ್ಗೆ ಇನ್ನು ಕೇವಲ 20 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ ಅಫ್ಘಾನಿಸ್ತಾನ ಐಸಿಸಿ ಪುರುಷರ ವಿಶ್ವಕಪ್‌ಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. 2021ರಲ್ಲಿ ಕೊನೆಯ ಬಾರಿಗೆ ಲಿಸ್ಟ್ ಎ ಪಂದ್ಯವನ್ನು ಆಡಿದ ವೇಗಿ ನವೀನ್-ಉಲ್-ಹಕ್ ಎರಡು ವರ್ಷಗಳ ಅಂತರದ ನಂತರ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಆದರೆ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಹಿರಿಯ ಆಲ್‌ರೌಂಡರ್ ಗುಲ್ಬದಿನ್ ನೈಬ್ ಸ್ಥಾನ ತಪ್ಪಿಸಿಕೊಂಡಿದ್ದಾರೆ.
ನವೀನ್ ಅಫ್ಘಾನಿಸ್ತಾನ ಪರ ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 25.42 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ನೈಬ್ ಪಾಕಿಸ್ತಾನದ ಸರಣಿಯಲ್ಲಿ ತನ್ನ ಏಕದಿನ ಪುನರಾಗಮನದಲ್ಲಿ ಮಿಂಚಿದರು ಮತ್ತು ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಆದರೂ ನೈಬ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಗಾಯದಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದ ನಂತರ ಅಜ್ಮತುಲ್ಲಾ ಒಮರ್ಜಾಯ್ ಕೂಡ ತಂಡಕ್ಕೆ ಮರಳಿದ್ದಾರೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಏಷ್ಯಾಕಪ್‌ನಲ್ಲಿ ಆಡಿದ ಗುಂಪಿನಿಂದ ನಾಲ್ಕು ಬದಲಾವಣೆಗಳನ್ನು ಹೊಂದಿದೆ. ನೈಬ್ ಹೊರತುಪಡಿಸಿ ಕರೀಂ ಜನತ್, ಶರಫುದ್ದೀನ್ ಅಶ್ರಫ್ ಮತ್ತು ಸುಲಿಮಾನ್ ಸಫಿ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಉಳಿದ ತಂಡವು ಏಷ್ಯಾಕಪ್‌ನಂತೆಯೇ ಕಾಣುತ್ತದೆ, ಸ್ಪಿನ್ ವಿಭಾಗವು ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಯುವ ಗನ್‌ಗಳಾದ ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್ ಅವರನ್ನು ಒಳಗೊಂಡಿದೆ. ಅಲ್ಲದೇ ನವೀನ್-ಉಲ್-ಹಕ್ ತಂಡಕ್ಕೆ ಮರಳುವುದರ ಜೊತೆಗೆ ಬೌಲಿಂಗ್ನಲ್ಲಿ ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್ ಮತ್ತು ಒಮರ್ಜಾಯ್ ಅವರನ್ನು ಒಳಗೊಂಡಿದೆ.