ಬ್ರಿಸ್ಬೇನ್: ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ನೇಥನ್ ಲಿಯಾನ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ 400 ವಿಕೆಟ್ ಪೂರ್ಣಗೊಳಿಸುವ ಮೂಲಕ, ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 3ನೇ ಬೌಲರ್ ಎನಿಸಿಕೊಂಡಿದ್ದಾರೆ.
ವರ್ಷಾರಂಭದಲ್ಲಿ 399 ರಲ್ಲಿದ್ದ ಲಿಯಾನ್ 400ರ ಮೈಲಿಗಲ್ಲನ್ನು ವರ್ಷದ ಕೊನೆಯ ತಿಂಗಳಲ್ಲಿ ಪೂರೈಸಿದ್ದಾರೆ. ಡೇವಿಡ್ ಮಲನ್ ಅವರ ವಿಕೆಟ್ ಪಡೆಯುವ ಮೂಲಕ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್(708) ಮತ್ತು ವೇಗಿ ಗ್ಲೇನ್ ಮೆಕ್ಗ್ರಾತ್(563) ಅವರ ನಂತರ 400 ವಿಕೆಟ್ ಪಡೆದ ಆಸೀಸ್ ಬೌಲರ್ ಎನಿಸಿಕೊಂಡರು.
2ನೇ ಏಷ್ಯೇತರ ಸ್ಪಿನ್ ಬೌಲರ್
ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದ 2ನೇ ಏಷ್ಯೇತರ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೂ ಲಿಯಾನ್ ಪಾತ್ರರಾದರು. ಶೇನ್ ವಾರ್ನ್(708) ನಂತರ 400 ವಿಕೆಟ್ಗಳ ಗಡಿ ದಾಟಿದ ಏಷ್ಯೇತರ 2ನೇ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ.
7ನೇ ಸ್ಪಿನ್ ಬೌಲರ್
ನೇಥನ್ ಲಿಯಾನ್ 400 ವಿಕೆಟ್ ಪಡೆದ 7ನೇ ಸ್ಪಿನ್ನರ್ ಆಗಿದ್ದಾರೆ. ಮುತ್ತಯ್ಯ ಮುರಳೀಧರನ್(800), ಶೇನ್ ವಾರ್ನ್(708), ಅನಿಲ್ ಕುಂಬ್ಳೆ(619), ರಂಗನಾ ಹೆರಾತ್(433), ಆರ್ ಅಶ್ವಿನ್(427) ಲಿಯಾನ್ ಗಿಂತ ಮೊದಲು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:Ashes test: ಗಬ್ಬಾದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್ಗಳ ಭರ್ಜರಿ ಗೆಲುವು, 1-0ಯಲ್ಲಿ ಸರಣಿ ಮುನ್ನಡೆ