ಹೈದರಾಬಾದ್: ಡಿಸೆಂಬರ್ 30, 2022 ರಂದು ಮುಂಜಾನೆ 5:30 ರ ಸುಮಾರಿಗೆ ರಿಷಬ್ ಪಂತ್ ಅವರ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಕ್ಕೆ ತುತ್ತಾದರು. ದೆಹಲಿಯಿಂದ ತಮ್ಮ ಹುಟ್ಟೂರಾದ ಉತ್ತರಾಖಂಡ್‌ನ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಸ್ಥಳದಲ್ಲೇ ಕಾರು ಸಂಪೂರ್ಣ ಬೆಂಕಿಗೆ ಆಹುತಿ ಅದರೆ, ಪಂತ್ ಪವಾಡದಂತೆ ಬದುಕುಳಿದಿದ್ದರು. ಈ ಘಟನೆ ಆಗಿ 1 ವರ್ಷ ಕಳೆದಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರಿಷಬ್ ತಂಡಕ್ಕೆ ಮರಳುವಿಯ ನಿರೀಕ್ಷೆ ಎಲ್ಲರಲ್ಲೂ ಇದೆ.
ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ 2023ರಲ್ಲಿ ಕ್ರಿಕೆಟ್ನಿಂದ ವಂಚಿತರಾದ ನಂತರ 2024ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯಶಸ್ವಿಯಾಗಿ ಮರಳುತ್ತಾರೆ ಎಂದು ಹಾರೈಕೆ ವ್ಯಕ್ತಪಡಿಸಿದ್ದಾರೆ.
2024ರ 17ನೇ ಆವೃತ್ತಿಯ ಐಪಿಎಲ್ನಲ್ಲಿ ರಿಷಬ್ ಪಂತ್ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಪಂತ್ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ ಈ ವರ್ಷ ಕ್ರಿಕೆಟ್‌ಗೆ ಮರಳುವ ನಿರೀಕ್ಷೆ ಅಂತೂ ಇದೆ. ಅವರು ಫಿಟ್ನೆಸ್ ಮತ್ತು ವರ್ಕೌಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಇನ್ನೂ ಕ್ರಿಕೆಟ್ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿಲ್ಲ.
ರಿಷಬ್ ಬಾಕ್ಸ್ ಆಫೀಸ್ ಕ್ರಿಕೆಟಿಗ:"ಅದೊಂದು ಗಂಭೀರ ಅಪಘಾತವಾಗಿತ್ತು. ಇಡೀ ಜಗತ್ತು ತನ್ನ ಉಸಿರನ್ನು ಹಿಡಿದಿಟ್ಟುಕೊಂಡಿತು. ನಂತರ ನಿಧಾನವಾಗಿ ಚೇತರಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ, ಫೋನ್‌ನಲ್ಲಿ ಮತ್ತು ಆರಂಭಿಕ ಮೊದಲ ನಡಿಗೆಯ ಹಂತಗಳನ್ನು ಅನುಸರಿಸಿ ನಂತರ ಜಿಮ್‌ನಲ್ಲಿನ ದೃಶ್ಯಗಳು ಮತ್ತು ನಂತರ ಅವರು ಆಡುವ ದೃಶ್ಯ ನಿರಾಳತೆ ತಂದವು. ರಿಕಿ ಪಾಂಟಿಂಗ್ ಜೊತೆಗಿನ ಫೋಟೋಗಳನ್ನು ನೋಡಿದ್ದೇನೆ. ನಾನು ಬೇಸಿಗೆಯಲ್ಲಿ ಆಶಸ್‌ನಲ್ಲಿ ರಿಕಿಯೊಂದಿಗೆ ಪ್ರಯಾಣಿಸಿದೆ. ಆಗ ರಿಷಬ್ ಚೇತರಿಕೆ ಬಗ್ಗೆ ಮಾಹಿತಿ ಸಿಕ್ಕಿತ್ತು. ರಿಷಬ್ ಬಾಕ್ಸ್ ಆಫೀಸ್ ಕ್ರಿಕೆಟಿಗರಾಗಿದ್ದಾರೆ" ಎಂದು ಹುಸೇನ್ ಹೇಳಿದ್ದಾರೆ.