ಅಹಮದಾಬಾದ್ (ಗುಜರಾತ್): ಭಾರತ ನ್ಯೂಜಿಲ್ಯಾಂಡ್ ನಡುವಿನ ಟಿ20 ಸರಣಿ ಸಮಬಲವಾಗಿದ್ದು, ಮೂರನೇ ಪಂದ್ಯ ಸೀರೀಸ್ ಗಲುವಿಗೆ ಫೈನಲ್ ಆಗಿದೆ. ತವರು ನೆಲದಲ್ಲಿ 12 ಸರಣಿಗಳನ್ನು ಗೆದ್ದಿರುವ ಭಾರತದ ದಾಖಲೆಯನ್ನು ಮುರಿಯಲು ಕಿವೀಸ್ ಪಡೆ ಸನ್ನದ್ಧವಾಗಿದೆ. ಮೂರನೇ ಪಂದ್ಯ ಅಹಮದಾಬಾದ್‌ನ ಸಬರಮತಿ ನದಿಯ ದಡದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೆಬ್ರವರಿ 1 ರಂದು ನಡೆಯಲಿದೆ.
ಮನರಂಜನೆಯ ಉದ್ದೇಶದಿಂದ ಕ್ರೀಡಾಂಗಣದೊಳಗಿನ ಚಿತ್ರ ಮಂದಿರ ಲಖನೌನಲ್ಲಿ ನಿನ್ನೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕಷ್ಟ ಪಟ್ಟು ದಡ ಸೇರಿದೆ. ಬ್ಲಾಕ್ಕ್ಯಾಪ್ಸ್ ನೀಡಿದ 100 ರನ್ಗಳ ಗುರಿಯನ್ನು ಸಾಧಿಸಲು 19.5 ಬಾಲ್ಗಳನ್ನು ಎದುರಿಸಿದ ತಂಡ 4 ವಿಕೆಟ್ ಸಹ ಕಳೆದು ಕೊಂಡಿತ್ತು. ಅಂತಿಮವಾಗಿ ಉಪನಾಯಕ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ರ ಬ್ಯಾಟಿಂಗ್ನಿಂದ ದಡ ಸೇರಿತು. ಈ ಮೂಲಕ ಸರಣಿಯಲ್ಲಿ ಭಾರತ 1-1 ರಿಂದ ಸಮಬಲ ಸಾಧಿಸಿತು.
ನರೇಂದ್ರ ಮೋದಿ ಸ್ಟೇಡಿಯಂ ಅಂತಿಮ ಫೈಟ್: ಭಾರತ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್ ಏಕದಿನ ಸರಣಿಯಲ್ಲಿ ಕ್ಲೀನ್ಸ್ಪೀಪ್ ಆಗಿ ಮುಖ ಬಂಗ ಅನುಭವಿಸಿತ್ತು. ಹೀಗಾಗಿ ಟಿ-20 ಸರಣಿ ಮೇಲೆ ಕಣ್ಣಿಟ್ಟಿರುವ ಸ್ಯಾಂಟ್ನರ್ ಪಡೆ ನಾಡಿದ್ದಿನ ಪಂದ್ಯದ ಗೆಲುವಿಗಾಗಿ ಹವಣಿಸುತ್ತಿದೆ. ತವರಿನಲ್ಲಿ 13ನೇ ಸರಣಿ ಗೆಲ್ಲುವ ತವಕದಲ್ಲಿ ಮೆನ್ ಇನ್ ಬ್ಲೂ ಇದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನ ಈಜುಕೊಳ ಕ್ರಿಡಾಂಗಣದ ವಿಶೇಷತೆ ಮತ್ತು ಒಳಾಂಗಣ ನೋಟ:ಅಹಮದಾಬಾದ್‌ನ ಸಬರಮತಿ ನದಿಯ ದಡದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿದೆ. ನರೇಂದ್ರ ಮೋದಿ ಸ್ಟೇಡಿಯಂ ಗುಜರಾತ್‌ನ ಅಹಮದಾಬಾದ್‌ನ ಮೊಟೆರಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನಲ್ಲಿದೆ. ಈ ಕ್ರೀಡಾಂಗಣವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
ಆಟಗಾಗರಿಗೆ ಸ್ನೂಕರ್ ಆಟದ ವ್ಯವಸ್ಥೆ ಈ ಕ್ರಿಡಾಂಗಣದ ಒಳಗೆ ಆಟಗಾರರಿಗೆ ಎಲ್ಲ ಸೌಲಭ್ಯವೂ ಇದೆ. ಆಗಾರರ ಫಿಟ್ನೆಸ್ ದೃಷ್ಟಿಯಿಂದ ಜಿಮ್ ಕೂಡ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಪ್ಲೇಯರ್ಗಳ ಮನರಂಜನೆಯ ಉದ್ದೇಶದಿಂದ ಇದರೊಳಗೆ ಥಿಯೇಟರ್ ವ್ಯವಸ್ಥೆಯೂ ಇದೆ. ಇದರಲ್ಲಿ ನೆಚ್ಚಿನ ಚಲನ ಚಿತ್ರಗಳನ್ನು ಆಟಗಾರರು ಒಟ್ಟಿಗೆ ಕುಳಿತು ವೀಕ್ಷಿಸ ಬಹುದಾಗಿದೆ. ಅಲ್ಲದೇ ಟೇಬಲ್ ಟೆನಿಸ್ ಮತ್ತು ಸ್ನೂಕರ್ ನಂತರ ಒಳಾಂಗಣ ಆಟದ ವ್ಯವಸ್ಥೆಯೂ ಇಲ್ಲಿದೆ.
ಆಟಗಾರರಿಗಾಗಿ ಮಾಡಲಾಗಿರುವ ಜಿಮ್ ವ್ಯವಸ್ಥೆ ಈ ಕ್ರೀಡಾಂಗಣವನ್ನು 24 ಫೆಬ್ರವರಿ 2020 ರಂದು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ಘಾಟಿಸಿದರು. 24 ಫೆಬ್ರವರಿ 2021 ರಂದು ಕ್ರಿಡಾಂಗಣವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಎಂದು ಕರೆದು ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರಿಡಲಾಯಿತು. ಇದು ಬರೋಬ್ಬರಿ 63 ಎಕರೆಯಲ್ಲಿದ್ದು, ಕ್ರಿಕೆಟ್ನ ಅತೀ ದೊಡ್ಡ ಕ್ರಿಡಾಂಗಣ ಎಂಬ ಖ್ಯಾತಿ ಇದಕ್ಕಿದೆ.
2015 ರಿಂದ 2020 ನಡುವೆ ಈ ಕ್ರಿಡಾಂಗಣವನ್ನು ನವೀಕರಿಸಲಾಯಿತು. ಮರು ನಿರ್ಮಾಣಗೊಂಡ ಕ್ರೀಡಾಂಗಣದಲ್ಲಿ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವೆ ಫೆಬ್ರವರಿ 24 ರಂದು ಪಿಂಕ್ ಬಾಲ್ನ ಅಹರ್ನಿಶಿ ಪಂದ್ಯ ನಡೆಯಿತು. ಈ ಕ್ರಿಡಾಂಗಣದಲ್ಲಿ ಬರೋಬ್ಬರಿ 1,10,000 ಜನ ಕುಳಿತು ಕೊಳ್ಳುವ ಸಾಮರ್ಥ್ಯ ಹೊಂಡಿದ್ದು ನಾಲ್ಕು ಪ್ರವೇಶ ದ್ವಾರಗಳಿಂದ ಕೂಡಿದೆ. ಹಾಗೂ ಬರುವ ಪ್ರೇಕ್ಷಕರಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಇದನ್ನೂ ಓದಿ:IND vs NZ 2nd T20 : ನಾಯಕ, ಉಪನಾಯಕನ ಆಟಕ್ಕೆ ಒಲಿದ ಜಯ, ಸರಣಿಯಲ್ಲಿ ಸಮಬಲ