ಹೈದರಾಬಾದ್:2023ರ ವಿಶ್ವಕಪ್ ಅರ್ಧದಷ್ಟು ಮುಕ್ತಾಯಗೊಂಡಿದೆ. ಈ ಟೂರ್ನಿಯಲ್ಲಿ ಟಾಪ್ ಫೋರ್ ಬರಬಹುದು ಎಂಬ ತಂಡಗಳು ಗೆಲುವು ಕಾಣುವಲ್ಲಿ ಎಡವಿವೆ. ಆದರೆ ದುರ್ಬಲ ತಂಡಗಳು ಎಂದೇ ಗುರುತಿಸಲಾಗುತ್ತಿದ್ದ ಟೀಮ್ಗಳು ಅಚ್ಚರಿಯ ಫಲಿತಾಂಶವನ್ನು ನೀಡಿವೆ. ಅಂಕಪಟ್ಟಿಯಲ್ಲಿ ಟಾಪ್ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿರುವ ತಂಡಗಳ ಗೆಲುವಿನ ಸೂತ್ರ ಹೀಗಿದೆ..
ವಿಶ್ವಕಪ್ 2023ರ ವಿಶ್ವಕಪ್ನಲ್ಲಿ ಭಾರತ ಸತತ ಐದು ಪಂದ್ಯಗಳನ್ನು ಗೆದ್ದು ಯಶಸ್ವಿ ತಂಡ ಎನಿಸಿಕೊಂಡಿದೆ. ಅಲ್ಲದೇ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೋಲು ಕಂಡರೂ ಉತ್ತಮವಾಗಿ ಟೂರ್ನಿಯಲ್ಲಿ ಮರಳಿದ್ದು, ಗೆಲುವಿನ ಲಯ ಮತ್ತು ಸೂತ್ರವನ್ನು ಕಂಡುಕೊಂಡಿದ್ದಾರೆ. ಈ ತಂಡಗಳ ಪ್ರಮುಖ ಗೆಲುವಿನ ಸೂತ್ರ ಮಧ್ಯಮ ಓವರ್‌ಗಳ ನಿಯಂತ್ರಣ ಆಗಿದೆ.
ಕಳೆದ ಎರಡು ವಿಶ್ವಕಪ್ ಪಂದ್ಯಾವಳಿಗಳ ರನ್ನರ್ಅಪ್ ಆದ ನ್ಯೂಜಿಲೆಂಡ್ ಇದುವರೆಗೆ ಮಧ್ಯಮ ಓವರ್‌ಗಳನ್ನು ಸೂಕ್ತವಾಗಿ ಬಳಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಸಾಧಾರಣ ಪ್ರದರ್ಶನದ ಹೊರತಾಗಿಯೂ. ಕಳೆದ ಐದು ಪಂದ್ಯಗಳಲ್ಲಿ, ಕಿವಿಸ್ ಬ್ಯಾಟರ್ಸ್ ಮಧ್ಯಮ ಓವರ್‌ಗಳಲ್ಲಿ 97.15 ಸ್ಟ್ರೈಕ್ ರೇಟ್‌ನೊಂದಿಗೆ 171 ರನ್ ಸರಾಸರಿಯಲ್ಲಿ 853 ರನ್ ಗಳಿಸುವ ಮೂಲಕ ಮಧ್ಯಮ ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಭಾರತವು ನಡೆಯುತ್ತಿರುವ ಆವೃತ್ತಿಯಲ್ಲಿ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಉತ್ತಮ ರನ್ ಗಳಿಸುತ್ತಿದೆ. ರೋಹಿತ್ ಅಂಡ್ ಕೋ 776 ರನ್ ಸಿಡಿಸಿದ್ದು, 155.2 ಸರಾಸರಿಯಲ್ಲಿ 95.45 ರಲ್ಲಿ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಐದು ಪಂದ್ಯಗಳಲ್ಲಿ ನಡುವಿನ 30-ಓವರ್‌ಗಳ ಅವಧಿಯಲ್ಲಿ 184 ಸರಾಸರಿಯಲ್ಲಿ 920 ರನ್‌ಗಳೊಂದಿಗೆ ಹರಿಣಗಳ ಪ್ರದರ್ಶನ ಉತ್ತಮವಾಗಿದೆ. 102.22ರ ಸ್ಟ್ರೈಕ್ ರೇಟ್‌ನಲ್ಲಿ ಹರಿಣಗಳ ಬ್ಯಾಟರ್ಗಳು ರನ್ ಕಲೆ ಹಾಕಿದ್ದಾರೆ. ಬಲಿಷ್ಠ ಆಸ್ಟ್ರೇಲಿಯನ್ನರು ನಿರೀಕ್ಷೆಗೆ ತಕ್ಕಂತೆ ಆರಂಭಿಕ ಪಂದ್ಯದಲ್ಲಿ ಪ್ರದರ್ಶನ ನೀಡದಿದ್ದರೂ, ನಂತರದ ಮೂರು ಪಂದಯಗಳಲ್ಲಿ ಕಮ್ಬ್ಯಾಕ್ ಮಾಡಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಮಧ್ಯಮ ಓವರ್‌ಗಳಲ್ಲಿ ತಂಡ 199 ಮತ್ತು 177 ರನ್ ಕಲೆಹಾಕಿ ಸೋಲುಂಡಿತ್ತು. ನಂತರ ಲಯಕ್ಕೆ ಮರಳಿರುವ ತಂಡ ಮಧ್ಯಮ ಓವರ್‌ಗಳಲ್ಲಿ 154.6 ಸರಾಸರಿಯಲ್ಲಿ 773 ರನ್ ಗಳಿಸಿದೆ.
11 ರಿಂದ 41ನೇ ಓವರ್ನಲ್ಲಿ ತಂಡಗಳ ಬ್ಯಾಟಿಂಗ್ ಅಂಕಿ-ಅಂಶ | |||||
ತಂಡ | ಪಂದ್ಯಗಳು | ರನ್ | ವಿಕೆಟ್ ಪತನ | ರನ್ ಸರಾಸರಿ (ಇನ್ನಿಂಗ್ಸ್) | ಸ್ಟ್ರೈಕ್ ರೇಟ್ |
ನ್ಯೂಜಿಲೆಂಡ್ | 5 | 853 | 9 | 170.6 | 97.15 |
ಭಾರತ | 5 | 776 | 12 | 155.2 | 95.45 |
ದಕ್ಷಿಣ ಆಫ್ರಿಕಾ | 5 | 920 | 17 | 184 | 102.22 |
ಪಾಕಿಸ್ತಾನ | 5 | 844 | 20 | 168.8 | 93.78 |
ಶ್ರೀಲಂಕಾ | 5 | 800 | 19 | 160 | 98.28 |
ಆಸ್ಟ್ರೇಲಿಯಾ | 5 | 773 | 21 | 154.6 | 88.65 |
ಬಾಂಗ್ಲಾದೇಶ | 5 | 648 | 20 | 129.6 | 74.65 |
ಇಂಗ್ಲೆಂಡ್ | 5 | 752 | 28 | 150.4 | 100 |
ಅಫ್ಘಾನಿಸ್ತಾನ | 5 | 652 | 28 | 130.4 | 76.53 |
ನೆದರ್ಲೆಂಡ್ | 5 | 612 | 31 | 122.4 | 77.86 |