ಮಿರ್ಪುರ್(ಬಾಂಗ್ಲಾದೇಶ): ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಬ್ಯಾಟರ್ ಮುಶ್ಫಿಕರ್ ರಹೀಮ್ ವಿಭಿನ್ನ ರೀತಿಯಲ್ಲಿ ವಿಕೆಟ್ ಕಳೆದುಕೊಂಡರು. ಫಿಲ್ಡಿಂಗ್ಗೆ ಅಡ್ಡಿಪಡಿಸಿರುವ ಕಾರಣಕ್ಕೆ ರಹೀಮ್ ಪೆವಿಲಿಯನ್ಗೆ ಮರಳಿದ್ದಾರೆ. ಈ ರೀತಿ ವಿಕೆಟ್ ಕಳೆದುಕೊಂಡ ಬಾಂಗ್ಲಾದ ಮೊದಲ ಬ್ಯಾಟರ್ ಎಂಬ ಅಪಖ್ಯಾತಿಗೂ ಅವರು ಒಳಗಾಗಿದ್ದಾರೆ.
ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಎರಡನೇ ಟೆಸ್ಟ್‌ನ ಮೊದಲ ದಿನದ ಒಂದನೇ ಅವಧಿ ಮುಕ್ತಾಯದ ಬಳಿಕ ಈ ಘಟನೆ ನಡೆಯಿತು. ಕೈಲ್ ಜೇಮಿಸನ್ ಹಾಕಿದ್ದ ಎಸೆತ ಎದುರಿಸಿದ ನಂತರ ರಹೀಮ್ ಚೆಂಡನ್ನು ಕೈಯಿಂದ ದೂರ ತಳ್ಳಿದರು. ಆದರೆ, ಬ್ಯಾಟರ್ ಚೆಂಡನ್ನು ಕೈಯಿಂದ ಹೊರತಳ್ಳುವಂತಿಲ್ಲ ಮತ್ತು ಬ್ಯಾಟ್ಗೆ ಚೆಂಡು ಸಂಪರ್ಕ ಹೊಂದಿದ ನಂತರ ಅದು ಎದುರಾಳಿ ತಂಡಕ್ಕೆ ಸೇರಿದ್ದಾಗಿರುತ್ತದೆ. ಹೀಗಿರುವಾಗ ಅದಕ್ಕೆ ಅಡ್ಡಿಪಡಿಸುವುದು ಅಪರಾಧ.
ಬ್ಯಾಟ್ಗೆ ಚೆೆಂಡು ತಗುಲಿದ ನಂತರ ನೆಲಕ್ಕೆ ಬಿದ್ದು ಮರಳಿ ವಿಕೆಟ್ ಬಳಿ ಬಂದಾಗ ಕಾಲು ಅಥವಾ ಬ್ಯಾಟ್ನಿಂದ ತಡೆಯಬಹುದು. ಆದರೆ ನೇರವಾಗಿ ಚೆಂಡನ್ನು ಬ್ಯಾಟರ್ ತಡೆಯುವಂತಿಲ್ಲ. ರಹೀಮ್ ಮಾಡಿದ ಕೃತ್ಯಕ್ಕೆ ಕಿವೀಸ್ ಆಟಗಾರರು ಅಂಪೈರ್ಗೆ ಮನವಿ ಮಾಡಿದರು. ಮುಶ್ಫಿಕರ್ ರಹೀಮ್ ತಮ್ಮ ನಡೆಯ ಬಗ್ಗೆ ಅಂಪೈರ್ಗೆ ವಿವರಿಸಿದರು. ಆದರೆ ಆನ್ ಫೀಲ್ಡ್ ಅಂಪೈರ್ಗಳು ಮೂರನೇ ಅಂಪೈರ್ ಜೊತೆ ಚರ್ಚಿಸಿ ಔಟ್ ಎಂಬ ನಿರ್ಣಯ ಕೈಗೊಂಡರು.
ಐಸಿಸಿ ನಿಯಮವೇನು?: ಫೀಲ್ಡಿಂಗ್‌ಗೆ ಅಡಚಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ 2017ರಲ್ಲಿ ಚೆಂಡನ್ನು ನಿಭಾಯಿಸುವ ಬಗ್ಗೆ ಕೆಲವು ನಿಯಮಗಳನ್ನು ತರಲಾಯಿತು. 37.1.1ರ ನಿಯಮದಂತೆ ಬ್ಯಾಟರ್ ಔಟಾಗಿದ್ದರೂ ಮೈದಾನದಲ್ಲಿ ಎದುರಾಳಿ ತಂಡಕ್ಕೆ ಕ್ಷೇತ್ರ ರಕ್ಷಣೆ ಮಾಡಲು ಉದ್ದೇಶಪೂರ್ವಕವಾಗಿ ಮಾತು ಅಥವಾ ಕ್ರಿಯೆಯಿಂದ ಅಡ್ಡಿಪಡಿಸಲು ಪ್ರಯತ್ನಿಸಿದರೆ ಅದು ತಪ್ಪು. 37.1.2ರಂತೆ ಬ್ಯಾಟರ್ ಬ್ಯಾಟ್ ಮಾಡುವ ಕೈಗಳಿಂದ ಚೆಂಡನ್ನು ತಡೆಯುವುದು, ವಿಕೆಟ್ಗೆ ಬೀಳದಂತೆ ಮಾಡಲು ಎರಡು ಬಾರಿ ಚೆಂಡಿಗೆ ಹೊಡೆಯುವುದು ಅಪರಾಧವಾಗುತ್ತದೆ.
ಚೆಂಡನ್ನು ಬ್ಯಾಟ್ ಯಾವಾಗ ಬ್ಯಾಟ್ ರಹಿತವಾಗಿ ತಡೆಯಬಹುದು? 37.2ರ ನಿಯಮದಲ್ಲಿ ಬ್ಯಾಟರ್ಗೆ ಆಡುವಾಗ ಅಡಚಣೆ ಉಂಟಾದಾಗ, ಚೆಂಡು ದೇಹಕ್ಕೆ ಬಡಿದು ಗಾಯಕ್ಕೆ ಕಾರಣವಾಗಬಹುದು ಎನಿಸಿದಾಗ ರಕ್ಷಣೆಗಾಗಿ, ಬ್ಯಾಟ್ಗೆ ತಗುಲಿದ ನಂತರ ನೆಲಕ್ಕೆ ಬಿದ್ದು ಮತ್ತೆ ವಿಕೆಟ್ ಕಡೆಗೆ ಬಂದಾಗ ಬ್ಯಾಟ್ ಅಥವಾ ಕಾಲಿನಿಂದ ರಕ್ಷಿಸಬಹುದು.
ಈ ಪಂದ್ಯದಲ್ಲಿ ನಡೆದಿದ್ದೇನು?: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಕ್ರೀಸಿಗೆ ಬಂದ ಬಾಂಗ್ಲಾದೇಶ ಮೊದಲ ದಿನವೇ ಕೇವಲ 66.2 ಓವರ್‌ಗಳನ್ನು ಆಡಿ ಆಲ್ಔಟ್ ಆಗಿದೆ. ಮುಶ್ಫಿಕರ್ ರಹೀಮ್ 35 ಮತ್ತು ಶಹದತ್ ಹೊಸೈನ್ 31 ರನ್ ಗಳಿಸಿದ್ದು ಬಿಟ್ಟರೆ ಮತ್ತಾರೂ ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಇದರಿಂದಾಗಿ 172 ರನ್ ಗಳಿಸಿದ ತಂಡ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿದ ಫಾಫ್ ಡು ಪ್ಲೆಸಿಸ್!