ಮುಂಬೈ :ವೆಸ್ಟ್ ಇಂಡೀಸ್ ತಂಡದ ಸೀಮಿತ ಓವರ್ಗಳ ನಾಯಕ ಮತ್ತು ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
2010ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ವಿಂಡೀಸ್ ದೈತ್ಯ ಸತತ 11 ವರ್ಷಗಳ ಕಾಲ ಒಂದೇ ತಂಡ ಪ್ರತಿನಿಧಿಸಿದ್ದಾರೆ. ಮುಂಬೈ ತಂಡದ ಆಟಗಾರನಾಗಿರುವ ಅವರು 171 ಪಂದ್ಯಳನ್ನಾಡಿದ್ದು, 150.9ರ ಸ್ಟ್ರೈಕ್ ರೇಟ್ನಲ್ಲಿ 3191 ರನ್ ಸಿಡಿಸಿದ್ದಾರೆ. ಇದರಲ್ಲಿ 16 ಅರ್ಧಶತಕ ಕೂಡ ಸೇರಿವೆ. ಬೌಲಿಂಗ್ನಲ್ಲಿ 63 ವಿಕೆಟ್ ಪಡೆದು ಮಿಂಚಿದ್ದಾರೆ.
ಪೊಲಾರ್ಡ್ ಜೊತೆ ದಶಕದ ನಂಟನ್ನು ಹೊಂದಿರುವ ಮುಂಬೈ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲಾತಾಣದಲ್ಲಿ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದೆ.
ಇದರಲ್ಲಿ ಸಿಎಸ್ಕೆ ವಿರುದ್ಧ ಕೇವಲ 34 ಎಸೆತಗಳಲ್ಲಿ 87 ರನ್ಗಳಿಸಿದ್ದ ದಿನದ ಪೊಲಾರ್ಡ್ ಆಟವನ್ನು ಕಿವೀಸ್ ವೇಗಿ ಬೌಲ್ಟ್, ಜಸ್ಪ್ರೀತ್ ಬುಮ್ರಾ ಹಾಗೂ ಶೇನ್ ಬಾಂಡ್ ಸೇರಿದಂತೆ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲಾರ್ಡ್ 2021 ರ ಐಪಿಎಲ್ನಲ್ಲಿ ಸಿಎಸ್ಕೆ ವಿರುದ್ಧ 219 ರನ್ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಕೇವಲ 34 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 87 ರನ್ಗಳಿಸಿ ಬೃಹತ್ ಮೊತ್ತವನ್ನು ಚೇಸ್ ಮಾಡಲು ಪ್ರಮುಖ ಪಾತ್ರವಹಿಸಿದ್ದರು.
ಮುಂಬೈ ಇಂಡಿಯನ್ಸ್ ತಂಡ ಗೆದ್ದಿರುವ 5 ಟ್ರೋಫಿಗಳಲ್ಲೂ ಪೊಲಾರ್ಡ್ ಪ್ರಮುಖ ಭಾಗವಾಗಿದ್ದಾರೆ. ಅಲ್ಲದೆ ಮುಂಬೈ ಪರ ಗರಿಷ್ಠ ಪಂದ್ಯಗಳನ್ನಾಡಿರುವ ಆಟಗಾರ ಕೂಡ ಅವರೇ ಆಗಿದ್ದಾರೆ.
ಇದನ್ನು ಓದಿ:ತಂದೆ ಕಳೆದುಕೊಂಡು ಕಣ್ಣೀರಿಡುತ್ತಿದ್ದಾಗ ಸಂತೈಸಿದ್ದು ವಿರಾಟ್ ಭಾಯ್: ಸಿರಾಜ್