ಮುಂಬೈ: ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗಾಯಗೊಂಡಿರುವ ಮೊಹಮ್ಮದ್ ಅರ್ಶದ್ ಖಾನ್ ಬದಲಿಗೆ 15ನೇ ಆವೃತ್ತಿಯ ಟೂರ್ನಮೆಂಟ್ನ ಉಳಿದ ಭಾಗಕ್ಕೆ ಕುಮಾರ್ ಕಾರ್ತಿಕೇಯ ಸಿಂಗ್ ಅವರನ್ನು ಸೇರಿಸಿಕೊಂಡಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದೆ.
24 ವರ್ಷದ ಕಾರ್ತಿಕೇಯ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಲ್ಲಿಯವರೆಗೆ 9 ಪ್ರಥಮ ದರ್ಜೆ,19 ಲಿಸ್ಟ್ ಎ ಮತ್ತು 8 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 35, 18 ಮತ್ತು 9 ವಿಕೆಟ್ ಪಡೆದಿದ್ದಾರೆ.