ಮುಂಬೈ (ಮಹಾರಾಷ್ಟ್ರ): ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರಲ್ಲಿ ಇನ್ನೂ ಕೆಲವು ಆವೃತ್ತಿಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಈಗಲೂ ಉತ್ತಮ ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಾರೆ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ಮಾರ್ಕ್ ಬೌಚರ್ ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಐಪಿಎಲ್‌ನಲ್ಲಿ ಎಷ್ಟು ಕಾಲ ಆಡಲು ಮುಂದುವರಿಯುತ್ತಾರೆ ಎಂದು ರೋಹಿತ್‌ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಅವರ ಕೊನೆಯ ಸೀಸನ್ ಎಂದು ನನಗೆ ತಿಳಿದಿಲ್ಲ, ನಾನು ಇದನ್ನು ಕಳೆದ 2-3 ವರ್ಷಗಳಿಂದ ಕೇಳುತ್ತಿದ್ದೇನೆ. ಅವರು ಇನ್ನೂ ಆಡಲು ಫಿಟ್ ಆಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಧೋನಿ ಇನ್ನಷ್ಟೂ ವರ್ಷ ಆಡಲು ಯೋಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
'ಐಪಿಎಲ್ 2023 ಕ್ಕೆ ಮುಂಚಿತವಾಗಿ, ಗಾಯಗೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಮುಂದಿನ ಕೆಲವು ದಿನಗಳಲ್ಲಿ ತಂಡವು ನಿರ್ಧರಿಸುತ್ತದೆ. ಬೂಮ್ರಾ ಅವರ ಬದಲಿ ಕುರಿತು, ನಾವು ಕೆಲವು ಆಯ್ಕೆಗಳ ಕುರಿತು ಚರ್ಚಿಸುತ್ತಿದ್ದೇವೆ. ಆಶಾದಾಯಕವಾಗಿ, ನಾವು ಮುಂದಿನ ಒಂದೆರಡು ದಿನಗಳಲ್ಲಿ ಅದನ್ನು ಬಹಿರಂಗ ಪಡಿಸುತ್ತೇವೆ' ಎಂದರು.
ಮುಂಬೈ ಇಂಡಿಯನ್ಸ್‌ಗೆ ಜಸ್ಪ್ರೀತ್ ಬುಮ್ರಾ ಅವರ ಪಾತ್ರವು ಸಾಕಷ್ಟು ಮಹತ್ವದ್ದಾಗಿತ್ತು. ಆದರೆ ಇದು ತಂಡದಲ್ಲಿರುವ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬೇರೆಯವರಿಗೆ ಅವಕಾಶ ನೀಡುತ್ತದೆ. ನಾವು ಕಳೆದ ಕೆಲವು ವರ್ಷಗಳಿಂದ ಈ ತಂಡದೊಂದಿಗೆ ಇರುವ ಕೆಲ ಆಟಗಾರರನ್ನು ಬೂಮ್ರಾ ಬದಲಿ ಪಯತ್ನಿಸುತ್ತೇವೆ. ಬುಮ್ರಾ ಮತ್ತು ಜಾಯ್ ರಿಚರ್ಡ್ಸನ್ ಇಲ್ಲದ ಕಾರಣ ಮುಂಬೈನ ವೇಗದ ಪಾಳೆಯ ವೀಕ್ ಆಗಿತ್ತು. ಆದರೆ, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮುಂಬೈಗೆ ಬಲವಾಗಿದ್ದಾರೆ' ಎಂದಿದ್ದಾರೆ.