ಬೆಂಗಳೂರು: ವಿಶ್ವದಾದ್ಯಂತ ಟಿ-20 ಲೀಗ್ಗಳಲ್ಲಿ ತನ್ನದೇ ಆದ ಸ್ಫೋಟಕ ಬ್ಯಾಟಿಂಗ್ ಮೂಲಕ ಹೆಸರು ಗಳಿಸುತ್ತಿರುವ ಸಿಂಗಾಪುರ್ ರಾಷ್ಟ್ರೀಯ ತಂಡದಲ್ಲಿ ಆಡಿರುವ ಆಲ್ರೌಂಡರ್ ಟಿಮ್ ಡೇವಿಡ್ ಅವರನ್ನು ಬರೋಬ್ಬರಿ 8.25 ಕೋಟಿ ರೂ.ಗಳಿಗೆ ಖರೀದಿಸುವ ಮೂಲಕ ಹಾರ್ದಿಕ್ ಪಾಂಡ್ಯರ ಸ್ಥಾನವನ್ನು ತುಂಬಿಸಿಕೊಂಡಿದೆ.
ಸ್ಫೋಟಕ ಆಲ್ರೌಂಡರ್ ಖರೀದಿಸಲು ಒಟ್ಟು 6 ತಂಡಗಳು ಪ್ರಯತ್ನಿಸಿದವು. ಆರಂಭದಿಂದಲೂ ಕೆಕೆಆರ್ ತಂಡ ಡೆಲ್ಲಿ, ಪಂಜಾಬ್, ರಾಜಸ್ಥಾನ್, ಲಖನೌ ಜೊತೆಗೆ ಪೈಪೋಟಿಗೆ ಬಿದ್ದು ಯಶಸ್ವಿಯಾಯಿತಾದರೂ ಮುಂಬೈ ಇಂಡಿಯನ್ಸ್ ಜೊತೆಗೆ ಪೈಪೋಟಿ ನೀಡುವುದಕ್ಕೆ ಸಾಧ್ಯವಾಗಲಿಲ್ಲ. 40 ಲಕ್ಷ ಮೂಲ ಬೆಲೆಯಿದ್ದ ಡೇವಿಡ್ ಕೊನೆಗೆ 8.25 ಕೋಟಿ ರೂ. ಪಡೆದುಕೊಂಡರು.
ಟಿಮ್ ಡೇವಿಡ್ ಕಳೆದ ಆವೃತ್ತಿಯಲ್ಲಿ ಆರ್ಸಿಬಿಯಲ್ಲಿದ್ದರಾದರೂ ಅವರಿಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಡೇವಿಡ್ ಬಿಗ್ಬ್ಯಾಶ್, ದಿ ಹಂಡ್ರೆಡ್, ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಒಟ್ಟು 85 ಪಂದ್ಯಗಳಿಂದ 159ರ ಸ್ಟ್ರೈಕ್ ರೇಟ್ನಲ್ಲಿ 9 ಅರ್ಧಶತಕಗಳ ಸಹಿತ 1,908 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರ ಪಟ್ಟಿ:
- ಇಶಾನ್ ಕಿಶನ್ - ಭಾರತೀಯ ವಿಕೆಟ್ ಕೀಪರ್ ₹ 15,25,00,000
- ಡೆವಾಲ್ಡ್ ಬ್ರೆವಿಸ್ - ವಿದೇಶಿ ಬ್ಯಾಟರ್ ₹ 3,00,00,000
- ಬಾಸಿಲ್ ಥಂಪಿ - ಭಾರತೀಯ ಬೌಲರ್ ₹ 30,00,000
- ಮುರುಗನ್ ಅಶ್ವಿನ್ - ಭಾರತೀಯ ಬೌಲರ್ ₹ 1,60,00,000
- ಜಯದೇವ್ ಉನಾದ್ಕತ್ - ಭಾರತೀಯ ಬೌಲರ್ ₹ 1,30,00,000
- ಮಯಾಂಕ್ ಮಾರ್ಕಂಡೆ - ಭಾರತೀಯ ಬೌಲರ್ ₹ 65,00,000
- ಎನ್.ತಿಲಕ್ ವರ್ಮಾ - ಭಾರತೀಯ ಆಲ್ರೌಂಡರ್ ₹ 1,70,00,000
- ಸಂಜಯ್ ಯಾದವ್ - ಭಾರತೀಯ ಆಲ್ರೌಂಡರ್ ₹ 50,00,000
- ಜೋಫ್ರಾ ಆರ್ಚರ್ - ವಿದೇಶಿ ಆಲ್ರೌಂಡರ್ ₹ 8,00,00,000
- ಡೇನಿಯಲ್ ಸ್ಯಾಮ್ಸ್ - ವಿದೇಶಿ ಆಲ್ರೌಂಡರ್ ₹ 2,60,00,000
- ಟೈಮಲ್ ಮಿಲ್ಸ್ - ವಿದೇಶಿ ಬೌಲರ್ ₹ 1,50,00,000
- ಟಿಮ್ ಡೇವಿಡ್ - ವಿದೇಶಿ ಆಲ್ರೌಂಡರ್ ₹ 8,25,00,000
ಇದನ್ನೂ ಓದಿ:ವಿಂಡೀಸ್ ಸ್ಟಾರ್ ಒಡಿಯನ್ ಸ್ಮಿತ್ಗೆ ಬಂಪರ್ ಲಾಟರಿ: ₹6 ಕೋಟಿಗೆ ಪಂಜಾಬ್ ಪಾಲು